ಜಟ್ಟಿಪಳ್ಳದಲ್ಲಿ ಸುದ್ದಿ ಜನಹಿತ ವೇದಿಕೆ ನೇತೃತ್ವದಲ್ಲಿ ಬೃಹತ್ ಸ್ವಾತಂತ್ರ್ಯ ನಡಿಗೆ – 18 ಮಂದಿ ಹಿರಿಯರಿಗೆ ಗೌರವಾರ್ಪಣೆ

0

 

ಸುದ್ದಿ ಜನಹಿತ ವೇದಿಕೆ ಜಟ್ಟಿಪಳ್ಳ ನೇತೃತ್ವದಲ್ಲಿ ಜಟ್ಟಿಪಳ್ಳದ ಎಲ್ಲ ಸಂಘಸಂಸ್ಥೆಗಳ ಕೂಡುವಿಕೆಯೊಂದಿಗೆ ದೇಶದ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಬೃಹತ್ ಸ್ವಾತಂತ್ರ್ಯ ನಡಿಗೆ ಮತ್ತು ಹಿರಿಯರಿಗೆ ಗೌರವಾರ್ಪಣೆ ಮಾಡುವುದರ ಮೂಲಕ ಆಚರಿಸಲಾಯಿತು.


ಬೆಳಿಗ್ಗೆ 7 ಗಂಟೆಗೆ ಜಟ್ಟಿಪಳ್ಳದ ಕಾನತ್ತಿಲ ಕಡೆಯವರು, ಜಟ್ಟಿಪಳ್ಳ ದೇವರ ಕಟ್ಟೆ ಕಡೆಯವರು ಮತ್ತು ಬೊಳಿಯಮಜಲು ಕಡೆಯಿಂದ ಬಂದ ಮಹಿಳೆಯರು, ಪುರುಷರು, ವೃದ್ಧರು ಮತ್ತು ಮಕ್ಕಳು ಕೆಂಚಪ್ಪ ಭಂಡಾರಿಯವರ ಮನೆಯ ಎದುರುಗಡೆ ಇರುವ ಸುಸ್ವಾಗತಂ ಫಲಕದ ಬಳಿ ಸೇರಿದರು. ಅಲ್ಲಿಂದ ಶ್ರೀರಾಂಪೇಟೆಯ ಜಟ್ಟಿಪಳ್ಳ ಕ್ರಾಸ್ ನಲ್ಲಿರುವ ಎಸ್ ವಿ ಎಂ ಆಸ್ಪತ್ರೆ ವರೆಗೆ ಪಾದಯಾತ್ರೆಯಲ್ಲಿ ಬಂದು ಹಿಂತಿರುಗಿ ಜಟ್ಟಿಪಳ್ಳದ ದೇವರ ಕಟ್ಟೆ ಬಳಿಗೆ ಹೋಗಲಾಯಿತು.
ಅಲ್ಲಿ ಗಾಯಕ ಭಾವನಾ ಬಳಗದ ಕೆ. ಆರ್. ಗೋಪಾಲಕೃಷ್ಣ ಹಾಗೂ ಅವರ ಶಿಷ್ಯೆಯರಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು.
*ಗೌರವಾರ್ಪಣೆೆ*
ಸ್ವಾತಂತ್ರದ ಅಮೃತ ಮಹೋತ್ಸವದ ಪ್ರಯುಕ್ತ ಜಟ್ಟಿಪಳ್ಳ ಪರಿಸರದ ಹದಿನೆಂಟು ಮಂದಿ ಹಿರಿಯ ಸಾಧಕರನ್ನು ಗೌರವಿಸಲಾಯಿತು.
ಡಾ। ಶಂಕರ ಭಟ್, ಡಾ। ರಂಗಯ್ಯ , ಮತ್ತು ಶ್ರೀಮತಿ ರತ್ನಾವತಿ ಮತ್ತು ಅಣ್ಣು ನಾಯ್ಕ್ , ಎ.ಕೆ.ಅಜಿಲ, ಹರೀಶ್ ಎಂ ಆರ್, ನರಸಿಂಗ ರೈ ಜಟ್ಟಿಪಳ್ಳ, ಕೆಂಚಪ್ಪ ಭಂಡಾರಿ, ಕೆ. ಅಬೂಬಕರ್ ಮೇಸ್ತ್ರಿ, ಕೆ. ಆರ್. ಗೋಪಾಲಕೃಷ್ಣ, ಬಿ. ಆರ್. ರೋಹಿತ, ಡಾ। ಕೇಶವ ಜಟ್ಟಿಪಳ್ಳ, ಶ್ರೀಮತಿ ಬೀಪಾತುಮ್ಮ, ಶ್ರೀಮತಿ ಪಾಚು, ಐ.ಎಚ್. ವಿಜಯ ಮೇಸ್ತ್ರಿ, ಶ್ರೀಮತಿ ತಾರಾವತಿ ಕೆ.ಎಲ್., ಟಿ.ನಾರಾಯಣ ಭಟ್, ಕೆ.ಕೆ.ಕೃಷ್ಣಪ್ಪ ಗೌಡ ಮತ್ತು ರಾಜಾರಾಮ ನಾಯಕ್ ರನ್ನು ಸನ್ಮಾನಿಸಲಾಯಿತು.
ನಗರ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತಡ್ಕ ಸನ್ಮಾನ ನೆರವೇರಿಸಿದರು.
ಸುದ್ದಿ ಜನಹಿತ ವೇದಿಕೆಯ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಹಾಗೂ ಸಂಚಾಲಕ ಹರೀಶ್ ಬಂಟ್ವಾಳ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.