ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಿದ ಶೌಚಾಲಯ ಉದ್ಘಾಟನೆ

0

ದುಗ್ಗಲಡ್ಕ ಸರ್ಕಾರಿ ಪ್ರೌಢಶಾಲೆಗೆ ಮೈಕ್ರೋಸಾಫ್ಟ್ ಮತ್ತು ರೈಟ್ ಟು ಲಿವ್ ಸಂಸ್ಥೆಯ ಸಹಯೋಗದಲ್ಲಿ ಸಿ.ಎಸ್.ಆರ್ ನಿಧಿಯಡಿ ಸುಮಾರು 3.5 ಲಕ್ಷ ರೂಪಾಯಿ ಮೊತ್ತದಲ್ಲಿ ಕೊಡುಗೆಯಾಗಿ ನಿರ್ಮಿಸಿಕೊಟ್ಟ ಹೆಣ್ಣು ಮಕ್ಕಳ ಶೌಚಾಲಯ ಉದ್ಘಾಟನಾ ಸಮಾರಂಭ ಆ.16ರಂದು ನಡೆಯಿತು.

 

ನಗರ ಪಂಚಾಯತ್ ಸದಸ್ಯೆ ಶಶಿಕಲಾ ಎ. ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ಪಿ. ಕೊಡುಗೆ ನೀಡಿದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿನಿಯರಾದ ಗಾಯತ್ರಿ ಮತ್ತು ಅನುಷ್ಯ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ಉದಯ್ ಕುಮಾರ್ ವೈ ಕೆ. ಸ್ವಾಗತಿಸಿ, ವೆಂಕಟ್ರಮಣ ಕೆ. ಎಸ್. ವಂದಿಸಿದರು. ಶಿಕ್ಷಕರಾದ ಶೋಭಾ, ಗೀತಾ ಕಾರ್ಯಕ್ರಮ ನಿರ್ವಹಿಸಿದರು.

ರೈಟ್ ಟು ಲಿವ್ ಸಂಸ್ಥೆಯ ವತಿಯಿಂದ ಪ್ರದೀಪ್ ಕುಮಾರ್, ಎಂಜಿನಿಯರ್ ಸಾಯಿ ಚೇತನ್ ಕೆ, ಶಾಲಾ ಗುಮಾಸ್ತ ವಸಂತ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಚಿತ್ರಾ, ಸಹಾಯಕಿ ಶಾರದಾ, ಶಾಲಾ ಅಡುಗೆ ಸಿಬ್ಬಂದಿ ಜಯಲತ, ರೆಜಿನಾ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.