ಭಾಸ್ಕರ ಗೌಡ ಹೊಸಗದ್ದೆ (ಮುಳ್ಯ) ನಿಧನ

0

ಅಜ್ಜಾವರ ಗ್ರಾಮದ ಮುಳ್ಯ -ಅಟ್ಲೂರು ಹೊಸಗದ್ದೆ ನಿವಾಸಿ ಭಾಸ್ಕರ ಗೌಡರು ಹೃದಯಾಘಾತದಿಂದ ಆ.16 ರಂದು ನಿಧನರಾದರು. ಅವರಿಗೆ ಸುಮಾರು 53 ವರ್ಷ ವಯಸ್ಸಾಗಿತ್ತು.

ಸಂಜೆ ಮನೆಯಲ್ಲಿದ್ದ ವೇಳೆ ಎದೆ ನೋವು ಕಾಣಿಸಿಕೊಂಡ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ರಾತ್ರಿ ಸುಮಾರು 11.30 ರ ವೇಳೆಗೆ ಅವರು ಕೊನೆಯುಸಿರೆಳೆದರು.

ಕೃಷಿಕರಾಗಿರುವ ಭಾಸ್ಕರರು ಮುಳ್ಯದಲ್ಲಿ ಅಂಗಡಿ ಹಾಗೂ ಕ್ಯಾಂಟೀನ್ ನಡೆಸುತ್ತಿದ್ದರು. ಆ ಬಳಿಕ ಸುಳ್ಯದ ಸರಕಾರ ಆಸ್ಪತ್ರೆಗೆ ಬಳಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದರು.

ಮೃತರು ಪತ್ನಿ ಮಾಜಿ ಗ್ರಾ.ಪಂ. ಸದಸ್ಯೆ ಭಾರತಿ, ಹಾಗೂ‌ ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here