ನಿವೃತ್ತ ಶಿಕ್ಷಕ ಶೇಷಪ್ಪ ಮಾಸ್ಟರ್ ಕಲ್ಲುಗದ್ದೆ ನಿಧನ

0

 

ಅರಂತೋಡು ಗ್ರಾಮದ, ಕಲ್ಲುಗದ್ದೆ ಶೇಷಪ್ಪ ಮಾಸ್ಟರ್ ರವರು ಅಲ್ಪಕಾಲದ ಅಸೌಖ್ಯದಿಂದ ಆ.18ರಂದು ಬೆಳಿಗ್ಗೆ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 98 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ನಿವೃತ್ತ ಶಿಕ್ಷಕ ಚಂದ್ರಶೇಖರ ಮಾಸ್ಟರ್ ಕಲ್ಲುಗದ್ದೆ, ವಸಂತ ಕಲ್ಲುಗದ್ದೆ, ನಿವೃತ್ತ ಶಿಕ್ಷಕ ಶಾಂತರಾಮ ಮಾಸ್ಟರ್ ಐವರ್ನಾಡು, ದುಗಲಡ್ಕ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟ್ರಮಣ ಮಾಸ್ಟರ್, ಪುತ್ರಿಯರಾದ ದಮಯಂತಿ ಶಿವಪ್ಪ ಐವರ್ನಾಡು, ಮೀನಾಕ್ಷಿ ಗಿರಿಧರ ವಿನೋಬನಗರ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.