ಗೂನಡ್ಕ : ಮನೆ ಮೇಲೆ ಬೀಳುತ್ತಿದ್ದ ಟಿಪ್ಪರ್ ತೆರವು

0

 

ಗೂನಡ್ಕದ ಮೂಲೆ ದರ್ಖಾಸ್ತು ರಸ್ತೆಯಲ್ಲಿ ನಿನ್ನೆ ರಾತ್ರಿ 11:30 ರ ವೇಳೆಗೆ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮಣ್ಣಿನಡಿಗೆ ಸಿಲುಕಿ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಟಿಪ್ಪರ್ ಮಣ್ಣಿ ನಡಿಗೆ ಸಿಲುಕಿತ್ತಲ್ಲದೆ ಸಮೀಪದಲ್ಲಿದ್ದ ಮನೆಗೆ ಬೀಳುವ ಸಾಧ್ಯತೆ ಇತ್ತು . ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಟಿಪ್ಪರ್ ಲಾರಿಯನ್ನು ತೆರವುಗೊಳಿಸಿದರು ಎಂದು ತಿಳಿದು ಬಂದಿದೆ.