ಕೆ.ವಿ.ಜಿ.ಪಾಲಿಟೆಕ್ನಿಕ್ : ಸಿಬ್ಬಂದಿಗಳಿಗೆ ಅಭಿನಂದನೆ ಹಾಗೂ ಲ್ಯಾಪ್ ಟಾಪ್ ಕೊಡುಗೆ

0

 

 

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ 2022-23 ನೇ ಸಾಲಿನ ಡಿಪ್ಲೊಮಾ ಸೀಟ್ ಗಳು ನೂರು ಶೇಕಡಾ ಭರ್ತಿಯಾಗುತ್ತಿದ್ದು, ಅದಕ್ಕಾಗಿ ಶ್ರಮಿಸಿದ ಸಿಬ್ಬಂದಿಗಳಿಗೆ ಆಡಳಿತ ಮಂಡಳಿಯ ಪರವಾಗಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಅಭಿನಂದನೆ ಸಲ್ಲಿಸಿದರು. ಎಲ್ಲಾ ಸಿಬ್ಬಂಧಿಗಳ ಪರವಾಗಿ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಎಂ.ಎನ್.ಚಂದ್ರಶೇಖರ್ , ಸತ್ಯನಾರಾಯಣ ಪ್ರಸಾದ್, ದೇವರಾಜ್ ಜಿ.ಕೆ, ಶ್ರೀಮತಿ ರಮಾದೇವಿ, ಯತೀಶ್ ಕೆ.ಎನ್ ಹಾಗೂ ಪ್ರದೀಪ್ ಎಂ ಇವರುಗಳನ್ನು ಪ್ರಾಂಶುಪಾಲ ಜಯಪ್ರಕಾಶ್ ಕೆ.ಯವರು ಡಾ.ಉಜ್ವಲ್ ಯು.ಜೆ ಯವರ ಸಮ್ಮುಖದಲ್ಲಿ ಶಾಲು ಹೊದಿಸಿ ಅಭಿನಂದಿಸಿದರು.

 


ಸಂಸ್ಥೆಯು ಎನ್.ಬಿ.ಎ. ಗೆ ನೋಂದಾವನೆ ಗೊಳ್ಳುವ ಹಂತದಲ್ಲಿದ್ದು ಅದರ ಕೆಲಸಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಎನ್.ಬಿ.ಎ ಸಂಚಾಲಕಿ ಶ್ರೀಮತಿ ಶಾಲಿನಿ ಎಂ.ಎಸ್ ಹಾಗೂ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆಯವರಿಗೆ ಆಡಳಿತ ಮಂಡಳಿಯ ವತಿಯಿಂದ ಲ್ಯಾಪ್ ಟಾಪ್ ನ್ನು ಪ್ರಾಂಶುಪಾಲರು ಹಸ್ತಾಂತರಿಸಿದರು.