ದಿ.ಡಾ.ಶ್ರೀಧರ್ ಮುರುಳ್ಯ ವೈಕುಂಠ ಸಮಾರಾಧನೆ

0

ಆ.12ರಂದು ನಿಧನರಾದ ಮಂಗಳೂರಿನಲ್ಲಿ ಸ್ಕಿನ್ ಸ್ಪೆಶಲಿಸ್ಟ್ ಆಗಿದ್ದ ಮುರುಳ್ಯದ ಡಾ.ಎಂ.ಎಲ್.ಶ್ರೀಧರ್ ರವರ ವೈಕುಂಠ ಸಮಾರಾಧನೆಯು ಆ.24 ರಂದು ಸುಳ್ಯದ ಕೊಡಿಯಾಲ್‌ಬೈಲ್ ಗೌಡ ಸಮುದಾಯಭವನದಲ್ಲಿ ನಡೆಯಿತು.


ಮೃತರ ಬಗ್ಗೆ ಡಾ। ಎನ್.ಎ ಜ್ಞಾನೇಶ್, ಡಾ.ಪಿ.ಎಸ್.ಭಟ್, ಶ್ರೀಮತಿ ಸುಲೋಚನಾ ಅವರು ಮಾತನಾಡಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ ಡಾ.ಕಲ್ಪನಾ ಶ್ರೀಧರ್, ಪುತ್ರರಾದ ಆಶುತೋಷ್, ಸವ್ಯಸಾಚಿ, ಸೊಸೆ, ಸಹೋದರರಾದ ಕುಸುಮಧರ, ಭಾಸ್ಕರ ಗೌಡ ಮುರುಳ್ಯ, ಚಂದ್ರಶೇಖರ ಗೌಡ ಎಂ.ಎಲ್., ಭವಾನಿಶಂಕರ್ ಮುರುಳ್ಯ, ಬಾಲಕೃಷ್ಣ ಮುರುಳ್ಯ, ಸಹೋದರಿಯರಾದ ಸುಲೋಚನ ರಾಮಣ್ಣ, ಪ್ರೇಮ ಲೋಕನಾಥ ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.