ಐವರ್ನಾಡು : ವಿಕಲಚೇತನರ ಸಂಜೀವಿನಿ ಸಂಘ ರಚನೆ

0

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ವಿಕಲಚೇತನರ ಸಂಜೀವಿನಿ ಸಂಘಗಳನ್ನು ಆ.22 ರಂದು ಐವರ್ನಾಡು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಉದ್ಘಾಟನೆ ಮಾಡಲಾಯಿತು. ಸಮಗ್ರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಸಭಾಧ್ಯಕ್ಷರಾದ ಶ್ರೀಮತಿ ರೇವತಿ ಬೋಳುಗುಡ್ಡೆ ದೀಪ ಬೆಳಗಿಸಿ ಸಂಘ ಉದ್ಘಾಟನೆ ಮಾಡಿದರು.

p>

ಸುಳ್ಯ ತಾಲೂಕು ಸಂಜೀವಿನಿ ಸಂಘಗಳ ಮೇಲ್ವಿಚಾರಕರಾಗಿರುವ ಮಹೇಶ್ ಸಂಜೀವಿನಿ ಸಂಘದ ಮಹತ್ವದ ಬಗ್ಗೆ ವಿಕಲಚೇತನರಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಐವರ್ನಾಡು ಗ್ರಾಮ ಸಂಜೀವಿನಿ ಸಂಘದ ಎಂಬಿ.ಕೆ ಎಲ್.ಸಿ.ಆರ್.ಪಿ. ಹಾಗೂ ಗ್ರಾಮದ ವಿಕಲಚೇತನರು ಅವರ ಪೋಷಕರು ಸಭೆಯಲ್ಲಿ ಹಾಜರಿದ್ದರು.


ಐವರ್ನಾಡು ಗ್ರಾಮದ ವಿ.ಆರ್.ಡಬ್ಲ್ಯೂ ಕಾರ್ಯಕ್ರಮ ನಿರೂಪಿಸಿ, ಗ್ರಾಮದ ಗ್ರಂಥಪಾಲಕಿ ಪ್ರಾರ್ಥಸಿ ಹಾಗೂ ಸಂಜೀವಿನಿ ಸಂಘದ ಎಂಬಿಕೆ ವಂದಿಸಿದರು.

LEAVE A REPLY

Please enter your comment!
Please enter your name here