ಸುಳ್ಯ ತಾಲೂಕು ಭಜನಾ ಪರಿಷತ್ ಮಹಾಸಭೆ

0

 

ಅಧ್ಯಕ್ಷ – ಯತೀಶ್ ರೈ ದುಗಲಡ್ಕ, ಕಾರ್ಯದರ್ಶಿ – ಸತೀಶ್ ಟಿ.ಎನ್, ಖಜಾಂಜಿ-ರವಿಚಂದ್ರ ಕೊಡಪಾಲ

ಸುಳ್ಯ ತಾಲೂಕು ಭಜನಾ ಪರಿಷತ್ ಇದರ ಮಹಾಸಭೆಯು ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಆ.27 ರಂದು ಸುಳ್ಯ ಯೋಜನಾಧಿಕಾರಿ ಕಛೇರಿ ಸಭಾಭವನದಲ್ಲಿ ನಡೆಯಿತು.


ವೇದಿಕೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಭಜನಾ ಕಮ್ಮಟದ ಸಂಯೋಜಕ ಚಂದ್ರಶೇಖರ ಧರ್ಮಸ್ಥಳ, ಸತೀಶ್ ಪೈ ಧರ್ಮಸ್ಥಳ, ಯೋಜನಾಧಿಕಾರಿ ನಾಗೇಶ್ ಪಿ, ಪರಿಷತ್ ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಕಾರ್ಯದರ್ಶಿ ಯತೀಶ್ ರೈ ಉಪಸ್ಥಿತರಿದ್ದರು.
ಧರ್ಮಸ್ಥಳದಲ್ಲಿ ಸೆ.16 ರಿಂದ 23 ರ ತನಕ ನಡೆಯಲಿರುವ ಭಜನಾ ತರಬೇತಿ ಕಮ್ಮಟದ ರೂಪು ರೇಷೆಗಳ ಬಗ್ಗೆ ಸಂಯೋಜಕ ಚಂದ್ರಶೇಖರ ಮತ್ತು ಸತೀಶ್ ಪೈ ಯವರು ಮಾಹಿತಿ ನೀಡಿದರು.
ಯೋಜನಾಧಿಕಾರಿ ನಾಗೇಶ್ ಪಿ ಯವರು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ,
ನೂತನ ಅಧ್ಯಕ್ಷ ಯತೀಶ್ ರೈ ದುಗಲಡ್ಕ, ಪ್ರಧಾನ ಕಾರ್ಯದರ್ಶಿ ಸತೀಶ್ ಟಿ.ಎನ್ ಕಲ್ಮಕ್ಕಾರು, ಕೋಶಾಧಿಕಾರಿ ರವಿಚಂದ್ರ ಕೊಡಪಾಲ, ಉಪಾಧ್ಯಕ್ಷರಾಗಿ ಕೇಶವ ಹೊಸೊಳಿಕೆ, ಶ್ರೀಮತಿ ಶರ್ಮಿಳಾ ರೈ ಬೆಳ್ಳಾರೆ, ಜತೆ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಮಂಡೆಕೋಲು, ನಿರ್ದೇಶಕರಾಗಿ ವೆಂಕಟೇಶ ಪೈ, ದಯಾನಂದ ಕೊರತ್ತೋಡಿ, ಕುಸುಮಾ ಬಾಳುಗೋಡು, ಪುರುಷೋತ್ತಮ, ಸೋಮಶೇಖರ ಪೈಕ, ಚಂದ್ರಕಾಂತ ಬಳ್ಪ, ವಿಜಯಕುಮಾರ್ ಚಾರ್ಮತ, ಆನಂದ ಹಾರೆಂಬಿ, ಶ್ರೀಮತಿ ಹರ್ಷ ಕರುಣಾಕರ ಸೇರ್ಕಜೆ,ಬಾಲಕೃಷ್ಣ ಮೇನಾಲ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪರಿಷತ್ ನ ನಿರ್ಗಮನಾಧ್ಯಕ್ಷ
ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಯವರನ್ನು ಪರಿಷತ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು.
ಯೋಜನಾಧಿಕಾರಿ ನಾಗೇಶ್ ಪಿ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಹೇಮಲತಾ ವಂದಿಸಿದರು. ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.ಪರಿಷತ್ತಿನ ಪದಾಧಿಕಾರಿಗಳು ಮತ್ತು ‌ಸದಸ್ಯರು ಹಾಗೂ ತಾಲೂಕಿನ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.