ಜತ್ತಪ್ಪ ಗೌಡ ಎಂರ್ಬಿಲ ನಿಧನ

0

 

 

ಬಳ್ಪ ಗ್ರಾಮದ ಎಂರ್ಬಿಲ ಜತ್ತಪ್ಪ ಗೌಡರು ಆ. 27ರಂದು ನಿಧನರಾದರು. ಇವರಿಗೆ 95ವರ್ಷ ವಯಸ್ಸಾಗಿತ್ತು.

ಇವರು ಬಳ್ಪದ ಶಿಲಾಮಯ ದೇಗುಲವಾದ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶ ಸಂದರ್ಭದಲ್ಲಿ ಆರಂಭೋತ್ಸವಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಮೃತರು ಪುತ್ರರಾದ ಧರ್ಮಪಾಲ ಎಂರ್ಬಿಲ, ಬೀದಿಗುಡ್ಡೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಹೊನ್ನಪ್ಪ ಎಂರ್ಬಿಲ, ಪುತ್ರಿಯರಾದ ಶ್ರೀಮತಿ ಜಯಂತಿ ಧರ್ಮಪಾಲ ಕೋಡಿಂಬಾಲ, ಶ್ರೀಮತಿ ವಸಂತಿ ಕಾಣಿಯೂರು ಶ್ರೀಮತಿ ಜಯಮ್ಮ ಜಯರಾಮ್ ಕಡೆಪಾಲ, ಶ್ರೀಮತಿ ಪುಟ್ಟಮ್ಮ ಸಕಲೇಶಪುರ, ಶ್ರೀಮತಿ ಲೀಲಾವತಿ ಕುಶಾಲಪ್ಪ ಕಟ್ಟ, ಶ್ರೀಮತಿ ರೇವತಿ ಅಲಂಕಾರು, ಸಹೋದರ ಶೀನಪ್ಪ ಗೌಡ ಎಂರ್ಬಿಲ ಸೇರಿದಂತೆ ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.