ಕೆವಿಜಿ ಐಪಿಎಸ್ ಕಿಂಡರ್ ಗಾರ್ಡನ್ ನಲ್ಲಿ ಕೆಂಪು, ಹಸಿರು ಬಣ್ಣದ ದಿನ

0

 

ಕೆವಿಜಿ ಐಪಿಎಸ್ ಕಿಂಡರ್ ಗಾರ್ಡನ್ ನಲ್ಲಿ ಆ. 27ರಂದು ಕೆಂಪು ಹಾಗೂ ಹಸಿರು ಬಣ್ಣಗಳ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಕೆಂಪು ಹಾಗೂ ಹಸಿರು ಬಣ್ಣದ ವಸ್ತ್ರ ಗಳನ್ನು ಧರಿಸಿ ಬಂದಿದ್ದು, ಹಸಿರು ಮತ್ತು ಕೆಂಪು ಬಣ್ಣದ ಆಟಿಕೆಗಳಿಂದ ತರಗತಿಯು ನೋಡಲು ವರ್ಣ ರಂಜಿತವಾಗಿತ್ತು. ಹಸಿರು ಮತ್ತು ಕೆಂಪು ಬಣ್ಣದ ತಿಂಡಿ, ಹಣ್ಣು ಹಂಪಲುಗಳನ್ನು ಮಕ್ಕಳು ತಿನ್ನಲು ತಂದಿದ್ದು, ಅದೇ ಬಣ್ಣದ ಆಟಿಕೆಗಳೊಂದಿಗೆ ಆಟವಾಡಿ ಸಂಭ್ರಮಿಸಿದರು. ಮಕ್ಕಳಿಗೆ ಬಣ್ಣಗಳ ಬಗ್ಗೆ ತಿಳುವಳಿಕೆ ನೀಡುವುದೇ ಈ ಚಟುವಟಿಕೆಯ ಮುಖ್ಯ ಉದ್ದೇಶ. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲ ಅರುಣಕುಮಾರ್ ಹಾಗೂ ಉಪಾಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಬಣ್ಣಗಳ ಕುರಿತ ಚಟುವಟಿಕೆಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.