ಸ್ವಾತಂತ್ರ್ಯ ನಡಿಗೆಯ ಬಗ್ಗೆ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಪೂರ್ವಭಾವಿ ಸಭೆ

0

 

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಲ್ಸೂರಿನಿಂದ ಸುಳ್ಯದವರೆಗೆ ಆಗಸ್ಟ್ 30 ರಂದು ನಡೆಯಲಿರುವ ಸ್ವಾತಂತ್ರ್ಯ ನಡಿಗೆಯ ಪೂರ್ವಭಾವಿ ಸಭೆಯು ಆಗಸ್ಟ್ 27 ರಂದು ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರ ನೇತೃತ್ವದಲ್ಲಿ ಕಲ್ಲುಗುಂಡಿಯ ಸಮನ್ವಯ ಸಹಕಾರಿ ಸಭಾಭವನದಲ್ಲಿ ಜರುಗಿತು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ.ಜಯರಾಮ ಹಾಗೂ ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿಯವರು ಮಾತನಾಡಿ ಸ್ವಾತಂತ್ರ್ಯ ನಡಿಗೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಈ ವೇಳೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ಕೋಲ್ಚಾರ್, ಕಿಸಾನ್ ಘಟಕದ ಅಧ್ಯಕ್ಷರಾದ ಸುರೇಶ್ ಅಮೈ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಮುಖಂಡರಾದ ಸದಾನಂದ ಮಾವಾಜಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ (ರಾಜು) ನೆಲ್ಲಿಕುಮೇರಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಎಸ್.ಯಮುನಾ, ಸದಸ್ಯರುಗಳಾದ ಶೌವಾದ್ ಗೂನಡ್ಕ, ಸುಮತಿ ಶಕ್ತಿವೇಲು, ಸುಶೀಲಾ ನಾಯ್ಕ್, ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಎಚ್.ಎ.ಹಮೀದ್, ಉಷಾ ರಾಮ ನಾಯ್ಕ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ತಾಜ್ ಮಹಮ್ಮದ್, ಎ.ಕೆ.ಹನೀಫ್, ಸಂಪಾಜೆ ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ಎ.ಕೆ.ಇಬ್ರಾಹಿಂ, ಸಂಪಾಜೆ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಬಾಲಚಂದ್ರ ಹಾಗೂ ಪ್ರಮುಖ ಕಾರ್ಯಕರ್ತರುಗಳಾದ ವಸಂತ ಗೌಡ ಪೆಲ್ತಡ್ಕ, ಸಿಲ್ವಸ್ಟರ್ ಡಿ’ಸೋಜಾ, ಜಿ.ಜಿ.ನವೀನ್ ಕುಮಾರ್, ಜಿ.ಎಂ.ಅಬ್ದುಲ್ಲಾ, ಜಿ.ಜಿ.ಶಿವಪ್ರಸಾದ್, ಕಾಂತಿ ಬಿ.ಎಸ್, ಜಿ.ಜಿ.ಚಂದ್ರವಿಲಾಸ್, ಟಿ.ಎ.ಆರಿಫ್ ದರ್ಖಾಸ್, ಟಿ.ಎ.ತಾಜುದ್ದೀನ್ ದರ್ಖಾಸ್, ಸೆಬಾಸ್ಟಿಯನ್, ಪಳನಿವೇಲು, ಸುರೇಂದ್ರ, ಪ್ರಸನ್ನಕುಮಾರ್, ಹರ್ಷಿತ್ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕರವರು ಸ್ವಾಗತಿಸಿ, ಸಂಪಾಜೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಐ.ಲೂಕಾಸ್ ವಂದಿಸಿದರು.