ಅರಂತೋಡು : ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆ

0

ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಆ.30 ರಂದು ಜಾಲ್ಸೂರಿನಿಂದ ಸುಳ್ಯದವರೆಗೆ ನಡೆಯಲಿರುವ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಭೆಯು ತಾಜುದ್ದೀನ್ ಅರಂತೋಡು ಅವರ ಉಸ್ತುವಾರಿಯಲ್ಲಿ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಆಗಸ್ಟ್ 27 ರ ಶನಿವಾರ ರಂದು ಜರಗಿತು, ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ.ಜಯರಾಮ ಮಾತನಾಡಿ ಅಖಿಲಭಾರತ ಕಾಂಗ್ರೆಸ್ ಸಮಿತಿ ನಿರ್ದೇಶನ ಪ್ರಕಾರ ಎಲ್ಲಾ ರಾಜ್ಯದ ಎಲ್ಲಾ ಬ್ಲಾಕ್ ಮಟ್ಟದಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸಲು ಜಾತಿ ಧರ್ಮ ಮೆರೆತು ಭಾರತದಲ್ಲಿ ಸರ್ವ ಜನಾಂಗದವರಿಗೆ ಬದುಕುವ ಹಕ್ಕು ಇದೆ.ಇದನ್ನು ಬಿಜೆಪಿ ಯವರು ದುರುಪಯೋಗ ಪಡೆದುಕೊಂಡು ಜನರಲ್ಲಿ ಭಿನ್ನತೆಯನ್ನು ಉಂಟುಮಾಡಲು ಹೊರಟಂತೆ ಇದೆ ಎಂದು ಹೇಳಿದರು ,

ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ,ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಯವರ ಪಾತ್ರವಿದ್ದರೂ ಇದೀಗ ಜನರಲ್ಲಿ ಹಾಗೂ ಯುವಕರಲ್ಲಿ ವೀರ ಸಾವರ್ಕರ್ ರವರ ಹೆಸರನ್ನು ಹೇಳಿಕೊಂಡು ತಪ್ಪು ದಾರಿಗೆ ತರುವಂತ ಕೆಲಸ ನಡೆಯುತ್ತಿದೆ .

ಇಂತಹ ದುಷ್ಪರಿಣಾಮಗಳನ್ನು ಹೊರ ತಳ್ಳುವಂತೆ ಮಾಡಲು ಇವತ್ತು ಕಾಲ್ನಡಿಗೆ ಯಂತಹ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದೇವೆ ಎಂದು ಟಿ.ಎಮ್.ಶಹೀದ್ ತೆಕ್ಕಿಲ್ ಪಕ್ಷವನ್ನು ಎಲ್ಲರೂ ಒಗ್ಗೂಡಿ ಕಟ್ಟುವಂತೆ ಪಾ ದಯಾತ್ರೆಯಲ್ಲಿಹೆಚ್ಚು ಜನ ಪಾಲ್ಗೊಳ್ಳಲು ಕರೆ ನೀಡಿದರು ಉಸ್ತುವಾರಿಗಳಾದ ಸದಾನಂದ ಮಾವಜಿ ಬ್ಲಾಕ್ ಕಾಂಗ್ರೇಸ್ ನ 75 ನೇ ಸ್ವಾತಂತ್ರ ಕಾಲ್ನಡಿಗೆ ಜಾಥ ಪೂರ್ವಭಾವಿ ಸಭೆಗಳ ಬಗ್ಗೆ ಮಾತನಾಡಿ ಜಾಥಾ ಬಗ್ಗೆ ವಿವರಣೆ ನೀಡಿ ಸರ್ವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು..

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೊಲ್ಚಾರ್,ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಆಮೈ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬುಶಾಲಿ ಗೂನಡ್ಕ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ರವಿ ಪೂಜಾರಿ, ,ತೊಡಿಕಾನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ,ತಿಮ್ಮಯ್ಯ ಮೆತ್ತಡ್ಕ, ಕೃಷ್ಣ ಅಡ್ಯಡ್ಕ, ಅರಂತೋಡು ತಾಲೂಕು ಪಂಚಾಯತ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಹೀಂ ಬೀಜದ ಕಟ್ಟೆ, ಮಜೀದ್ ಸಿಟಿ ಮೆಡಿಕಲ್ಸ್ ಅರಂತೋಡು, ಗೂನಡ್ಕ ದರ್ಕಾಸ್ ಬೂತ್ ಅದ್ಯಕ್ಷರಾದ ಅಬ್ದುಲ್ಲ ಚೇರೂರ್, ಕಾಂಗ್ರೇಸ್ ಸೇವಾದಳ ಯುವ ಘಟಕದ ಅಧ್ಯಕ್ಷರಾದ ಜುರೈದ್ ತೆಕ್ಕಿಲ್ ಪೇರಡ್ಕ,ಎನ್ ಎಸ್ ಯು ಐ ಜಿಲ್ಲಾ ಕಾರ್ಯದರ್ಶಿ ಉಬೈಸ್ ಗೂನಡ್ಕ, ಆಶಿಕ್ ಅರಂತೋಡು , ಕುಂಞಕಣ್ಣ ಗೂನಡ್ಕ, ಜೋಶ್ ವರ್ಗೀಸ್ ಗೂನಡ್ಕ, ನಾರಾಯಣ ಪೇರಂಗೋಡು, ,ಅಮೀರ್ ಕುಕ್ಕುಬಳ, ಅಬೂಬಕ್ಕರ್ ಪಾರಕಲ್ಲ್, ಚೌಕರ್ ಕಟ್ಟಕೊಡಿ ,ಉನೈಸ್ ಗೂನಡ್ಕ , ಶಂಸುದ್ದಿನ್ ಗೂನಡ್ಕ, ಟಿ.ಎಂ ಮಮ್ಮು ತೆಕ್ಕಿಲ್ ಗೂನಡ್ಕ, ಆಶ್ರಫ್ ಪೇರಡ್ಕ,ಸದುಮಾನ್ ತೆಕ್ಕಿಲ್ ಪೇರಡ್ಕ ಸೇರಿದಂತೆ ಅರಂತೋಡು ತೊಡಿಕಾನ ಗ್ರಾಮ ವ್ಯಾಪ್ತಿಯ ಗೂನಡ್ಕ ಭಾಗದ ಯುವ ಕಾಂಗ್ರೇಸ್ ಮತ್ತು ಎನ್.ಎಸ್.ಯು.ಐ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಹಿತ 80 ರಷ್ಟು ಜನ ಸಭೆಯಲ್ಲಿ ಭಾಗವಹಿಸಿದರು.ತಾಜುದ್ದೀನ್ ಅರಂತೋಡು ಸ್ವಾಗತಿಸಿ ವಂದಿಸಿದರು.