ಅರಂಬೂರು ರೋಟರಿ ಸಮುದಾಯ ದಳ ಪದಗ್ರಹಣ

0

ರೋಟರಿ ಸಮುದಾಯ ದಳ ಅರಂಬೂರು ಇದರ ಪದಗ್ರಹಣ ಸಮಾರಂಭವು ಅರಂಬೂರಿನ ರೋ. ಪ್ರಭಾಕರನ್ ಸಿ ಎಚ್ ಇವರ ಸ್ವಗೃಹದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಆಗಮಿಸಿ ರೋಟರಿ ಅಧ್ಯಕ್ಷ ರೋ. ಚಂದ್ರಶೇಖರ ಪೆರಾಲು ಇವರು ನೂತನ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತಾ ಹಾಗೂ ಕಾರ್ಯದರ್ಶಿ ಇವರಿಗೆ ಶ್ರೀಮತಿ ಲಲಿತಾ ಇವರಿಗೆ ದಾಖಲೆ ಹಸ್ತಾಂತರಿಸಿ ಪದಗ್ರಹಣ ನೆರವೇರಿಸಿ ಗ್ರಾಮೀಣ ಪ್ರದೇಶದ ಜನರು ಕೂಡ ಸಮುದಾಯ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಪೂರ್ವಾಧ್ಯಕ್ಷ ರೋ ಪ್ರಭಾಕರನ್ ನಾಯರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಕಾರ್ಯಕ್ರಮದಲ್ಲಿ ರೋಟರಿ ಕೋಶಾಧಿಕಾರಿ ರೋ ಭಾಸ್ಕರನ್ ನಾಯರ್ , ರೋ.ವಿಶ್ವನಾಥ ನಾಯರ್, ಪೂಮಲೆ ಕ್ರೀಡಾ ಸಂಘ ಇದರ ಅಧ್ಯಕ್ಷ ಧನಂಜಯ, ಮತ್ತು ಶ್ರೀ ಕೃಷ್ಣ ಮೂರ್ತಿ ಭಟ್.ಇವರು ಉಪಸ್ಥಿತ ರಿದ್ದರು. ಕಾರ್ಯಕ್ರಮದಲ್ಲಿ ರೋ ಪ್ರಭಾಕರನ್ ಸಿ ಏಚ್ ದಂಪತಿಗಳನ್ನು ಗೌರವಿಸಲಾಯಿತು. ರೋ ಬಾಪು ಸಾಹೇಬ್ ಇವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.


ಕುಮಾರಿ ಮಂಜು ಇವರು ಪ್ರಾರ್ಥಿಸಿ ರೋಟರಿ ಸಮುದಾಯ ದಳದ ಕಾರ್ಯದರ್ಶಿ ಶ್ರೀಮತಿ ಲಲಿತಾ ವಂದಿಸಿದರು.