ಸುಳ್ಯ 54 ನೇ ವರ್ಷದ ಗಣೇಶೋತ್ಸವ ಸಮಾಪನ

0

ನಗರದಲ್ಲಿ ವೈಭವದ ಗಣೇಶನ ಶೋಭಾಯಾತ್ರೆ

ಸುಳ್ಯ 54 ನೇ ವರ್ಷದ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸೇವಾ ಪ್ರಮುಖ್ ನ.ಸೀತಾರಾಮ ತೆಂಗಿನಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸೋಮನಾಥ ಕೆ, ಉಮೇಶ್ ಪಿ.ಕೆ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಚೆಂಡೆ ವಾದ್ಯ ಘೋಷಗಳೊಂದಿಗೆ ಸುಂದರವಾದ ಆಕರ್ಷಕ ರಥದಲ್ಲಿ ಗಣೇಶನ ಮೂರ್ತಿಯನ್ನು ಕುಳ್ಳಿರಿಸಿ ವೈಭವದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳಿಸಲಾಯಿತು. ಸ್ಥಳೀಯ ಭಕ್ತಾದಿಗಳು ಹಾಗೂ ಕೇಸರ ಪಟ್ಟಿ ಧರಿಸಿದ ಯುವಕರ ತಂಡ ಮತ್ತು ಆಕರ್ಷಕ ಗೊಂಬೆ ಕುಣಿತ ಆಕರ್ಷಣೀಯವಾಗಿತ್ತು.