ಸುಬ್ರಹ್ಮಣ್ಯ:52ನೇ ಗಣೇಶೋತ್ಸವ ಸಂಪನ್ನ – ಆಕರ್ಷಕ ಶೋಭಾಯಾತ್ರೆ

0

ಕುಮಾರಧಾರದಲ್ಲಿ ಮೂರ್ತಿ ಜಲಸ್ಥಂಭನ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 52ನೇ ವರ್ಷದ ಗಣೇಶೋತ್ಸವವು ಆ.31 ರಂದು ಆರಂಭಗೊಂಡು ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಸೆ.4 ರಂದು ವಿಜ್ರಂಭಣೆಯ ಶೋಭಾಯಾತ್ರೆಯ ಮೂಲಕ ಗಣೇಶ್ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಯಿತು.

ಮೆರವಣಿಗೆಯ ಉದ್ದಕ್ಕೂ ಭಕ್ತಾಧಿಗಳು ಅಲ್ಲಲ್ಲಿ ಶ್ರೀ ದೇವರಿಗೆ ಹಣ್ಣುಕಾಯಿ ಮಂಗಳಾರತಿ ನೀಡಿದರು.
ಶ್ರೀ ಗಣಪತಿ ಶೋಭಾಯಾತ್ರೆಯು ಶ್ರೀ ದೇವಳದ ರಥಬೀದಿಯಿಂದ ಸಂಜೆ ಆರಂಭಗೊಂಡಿತು. ಭವ್ಯ ಶೋಭಾಯಾತ್ರೆಯಲ್ಲಿ ಆಕರ್ಷಕ ಕುಣಿತ ಭಜನೆ, ಕುಕ್ಕೆಮೇಟ್ಸ್ ತಂಡದಿಂದ 6ನೇ ವರ್ಷದ ಸ್ಥಬ್ದಚಿತ್ರ, ಸ್ವತಂತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ, ಪರಿಷತ್ ಮತ್ತು ಬಜರಂಗದಳ ಶಿವಾಜಿ ಶಾಖೆಯಿಂದ ಸ್ತಬ್ಧಚಿತ್ರ, ಸ್ಕಂಧಶ್ರೀ ಯುವ ಮಲೆಕುಡಿಯರ ಸಂಘ ಸುಬ್ರಹ್ಮಣ್ಯದಿಂದ ಬಾಸ್ಕರ್ ಸುಬ್ರಹ್ಮಣ್ಯ ಇವರ ಸಂಯೋಜನೆಯಲ್ಲಿ 10ನೇ ವರ್ಷದ ಆಂಜನೇಯ ನ ಸ್ಥಬ್ದಚಿತ್ರಗಳು ಯಾತ್ರೆಗೆ ಮೆರುಗು ನೀಡಿತು.

ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವ ಇವರಿಂದ ಚೆಂಡೆ ಮೇಳ, ಚಿಲಿಪಿಲಿ ಗೊಂಬೆ ಬಳಗ ಬಂಟ್ವಾಳ ಇವರಿಂದ ಆಕರ್ಷಕ ಗೊಂಬೆಗಳು ಮತ್ತು ಕೀಲು ಕುದುರೆ, ಬ್ಯಾಂಡ್‌ವಾದ್ಯ, ಯಕ್ಷಗಾನ ವೇಷಭೂಷಣಗಳನ್ನು ಒಳಗೊಂಡ ತಟ್ಟಿರಾಯ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಮೆರವಣಿಗೆ ಸಂದರ್ಭ ಕುಕ್ಕೆಶ್ರೀ ಅಟೋ ಚಾಲಕ ಮಾಲಿಕ ಸಂಘದಿಂದ ಪಾನಕ ವ್ಯವಸ್ಥೆ, ಸಮಿತಿಯ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು ಸೇರಿದಂತೆ ವಿವಿಧ ಸಮಿತಿ ಸಂಚಾಲಕರು, ಪದಾಧಿಕಾರಿಗಳು, ಸಮಿತಿ ಸದಸ್ಯರು, ಪೂರ್ವಾಧ್ಯಕ್ಷರು, ಭಕ್ತಾಧಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು .