ಶಿಕ್ಷಣ ಸಂಪನ್ಮೂಲ ಕೇಂದ್ರ ಸುಳ್ಯ ತಾಲೂಕು ಸಮಿತಿ ಮಹಾಸಭೆ, ನೂತನ ಸಮಿತಿ ರಚನೆ

0

 

ಅಧ್ಯಕ್ಷರಾಗಿ ಶಂಕರ್ ಪೆರಾಜೆ ಆಯ್ಕೆ

ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 9ರಂದು ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಉಪಾಧ್ಯಕ್ಷೆ ಪೂರ್ಣಿಮಾ ವಹಿಸಿದ್ದರು. ಸಮಿತಿಯ ಸದಸ್ಯರು ಸಂಪನ್ಮೂಲ ವ್ಯಕ್ತಿ ನಾರಾಯಣ ಕಿಲಂಗೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ಮುಂದಿನ ಸಾಲಿನ ಸಮಿತಿ ರಚಿಸಿ ಅಧ್ಯಕ್ಷರಾಗಿ ಶಂಕರ್ ಪೆರಾಜೆ ರವರನ್ನು, ಕಾರ್ಯದರ್ಶಿಯಾಗಿ ತೀರ್ಥರಾಮ ಉರುಂಡೆ, ಕೋಶಾಧಿಕಾರಿಯಾಗಿ ರಾಜೇಶ್ವರಿ ಕಾಡು ತೋಟ, ಉಪಾಧ್ಯಕ್ಷರಾಗಿ ಪೂರ್ಣಿಮಾ, ಸಂಘಟನಾ ಕಾರ್ಯದರ್ಶಿಯಾಗಿ ಹಸೈನಾರ್ ಜಯನಗರ, ನಿರ್ದೇಶಕರುಗಳಾಗಿ ಮಾಧವ ಗೌಡ ಸುಳ್ಯಕೋಡಿ, ಮೋನಪ್ಪ ಕೊಳಗೆ, ವೆಂಕಟೇಶ್ ಭಟ್, ನಾರಾಯಣ ಕಿಲಂಗೋಡಿ, ವೆಂಕಟ ಕೃಷ್ಣ ಆಚಾರ್ಯ ಇವರನ್ನು ಆಯ್ಕೆ ಮಾಡಲಾಯಿತು.
ರಾಜೇಶ್ವರಿ ಕಾಡು ತೋಟ ವಂದಿಸಿದರು.