ತಮಿಳು‌ ಕಾರ್ಮಿಕರ ಸಮಸ್ಯೆ ‌ನಿವಾರಣೆಗೆ ಬೆಂಗಳೂರಿನಲ್ಲಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಸಭೆ

0

 

ಸುಳ್ಯ ವಿಧಾನಸಭಾ ಕ್ಷೇತ್ರದ ತಮಿಳು ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಸಚಿವ ಎಸ್ ಅಂಗಾರ ಅವರು, ವಿಧಾನಸೌಧದ ತಮ್ಮ ಕಛೇರಿಯಲ್ಲಿ, ಕೆ‌‌ಎಫ್.ಡಿ.ಸಿ ಆಡಳಿತ ನಿರ್ದೇಶಕಿ ರಾಧಾದೇವಿ ಜೊತೆ ಸೆ.16 ಸಭೆ ನಡೆಸಿದರು.
ಕೆಲಸದಿಂದ ಕೈ ಬಿಟ್ಟಿರುವ ಕಾರ್ಮಿಕರನ್ನು ಮರುನೇಮಕ ಮಾಡಲು, ಹಾಗೂ ಬಾಕಿ ಇರುವ ವೇತನವನ್ನು ತಕ್ಷಣ ಕಾರ್ಮಿಕರಿಗೆ ಪಾವತಿಸಲು ಸಚಿವರು ಸೂಚನೆ ನೀಡಿದರು.
ನಿಗಮದಲ್ಲಿನ ಕೆಲವೊಂದು ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಕಾರ್ಯಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲು ಸಚಿವರು ಸೂಚಿಸಿದರು. ಈ ಸಂದರ್ಭದಲ್ಲಿ ಕೆ ಎಫ್ ಡಿ ಸಿ ಅಧ್ಯಕ್ಷ ಎ.ವಿ ತೀರ್ಥರಾಮ, ಸುಳ್ಯ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕಾರ್ಯದರ್ಶಿ ಶ್ರೀನಾಥ್ ರೈ ಬಾಳೀಲ, ತಮಿಳು ಕಾರ್ಮಿಕ ಮುಖಂಡರಾದ ಸುಪ್ಪಯ್ಯ, ಸುಂದರಲಿಂಗಮ್, ಸಚೀವರ ವಿಶೇಷ ಕರ್ತವ್ಯಾಧಿಕಾರಿ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here