ಸುಳ್ಯ: ತಮಿಳು ಬಾಂಧವರ ಕ್ರೀಡಾ ಸಮಿತಿ ಅಸ್ಥಿತ್ವಕ್ಕೆ

0

ಸಮುದಾಯದ ಯುವಜನರಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸಲು ಸ್ಪೋರ್ಟ್ಸ್ ಅಕಾಡೆಮಿಯನ್ನು ರಚಿಸುವ ಬಗ್ಗೆ ಭಾನುವಾರ ಸಭೆ ನಡೆಯಿತು.

ಈ ಸಭೆಯಲ್ಲಿ ಕ್ರೀಡಾ ಮಂಡಳಿಯನ್ನು ಆರಂಭಿಸುವ ನಿಟ್ಟಿನಲ್ಲಿ ಸುಳ್ಯದ ತಮಿಳು ಬಾಂಧವರು ಸೇರಿ ಕ್ರೀಡಾ ಸಮಿತಿಯನ್ನು ರಚಿಸಲಾಯಿತು, ಆ ಸಮಿತಿಗೆ ಕ್ರೀಡಾ ಅಕಾಡೆಮಿಯನ್ನು ಮುನ್ನಡೆಸುವ ಪೂರ್ಣ ಜವಾಬ್ದಾರಿಯನ್ನು ನೀಡಲಾಯಿತು.
ಸಭೆಯಲ್ಲಿ ರೀಕೋ ಕ್ರೀಡಾ ಮಂಡಳಿ ಸಮಿತಿ ಸಂಚಾಲರಾಗಿ ಮೋನಪ್ಪ ಎನ್. ಸುಳ್ಯ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಅಭಿಲಾಷ್ ಕುಶಾಲನಗರ -ಕೊಂಬಾರ್, ಶಂಕರಲಿಂಗಂ-ದರ್ಖಾಸ್ತು, ರಾಜಲಿಂಗಂ.ಎ, ಕೋಣಾಜೆ, ವನರಾಜ್-ಕೌಡಿಚಾರ್, ರಾಮನ್ -ಕಲ್ಲಾಜೆ, ಪುವೇಂದ್ರನ್- ಕೂಟೇಲ್, ಕುಮಾರ್ -ಸಿ.ಕೂಪ್ ಇವರುಗಳನ್ನು ಆಯ್ಕೆ ಮಾಡಲಾಯಿತು.


ಸಮುದಾಯದ ಯುವಸಂಪನ್ಮೂಲವನ್ನು ಬಲಗೊಳಿಸಿ, ಉತ್ತಮ ಮಾರ್ಗದರ್ಶನ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಸದುದ್ದೇಶದಿಂದ ಆರಂಭಿಸಲಾದ ಈ ಸಮಿತಿಯ ಎಲ್ಲಾ ಕಾರ್ಯಗಳಿಗೆ ರೀಕೋ ಸೊಸೈಟಿ ಪೂರ್ಣ ಸಹಕಾರವನ್ನು ನೀಡಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸ್ಪೋರ್ಟ್ಸ್ ಅಕಾಡೆಮಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ರೀಕೋ ಸೊಸೈಟಿ ಸಮಿತಿಯ ಜತೆ ಕೈಜೋಡಿಸಿ ಕಾರ್ಯನಿರ್ವಹಿಸಲಿದೆ. ಸಭೆಯಲ್ಲಿ ಸಮುದಾಯದ ಮುಖಂಡರು, ರೀಕೋ ಪ್ರವರ್ತಕರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.