ಎಡಮಂಗಲ ಸಹಕಾರಿ ಸಂಘದ ಮಹಾಸಭೆ – ಸನ್ಮಾನ

0

ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ ರವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಎಡಮಂಗಲ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರು ನಮ್ಮ ಹಿರಿಯರು ಸಂಘವನ್ನು ಹೇಗೆ ಬೆಳೆಸಿಕೊಂಡು ಬಂದರು ಹಾಗೆಯೇ ಅವರ ಮಾರ್ಗದರ್ಶನದಂತೆ ಸಂಘವನ್ನು ಉಳಿಸಿ ಬೆಳೆಸಬೇಕೆಂದರು. ಸಂಘವು ಕಳೆದ ಸಾಲಿನಲ್ಲಿ 3096909.30 ರಷ್ಟು ಲಾಭಗಳಿಸಿದ್ದು, ಸದಸ್ಯರಿಗೆ 4.56 ಡಿವಿಡೆಂಟ್ ನೀಡಲಾಗುವುದೆಂದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ದೋಳ್ತಿಲ ವರದಿ ವಾಚಿಸಿದರು.


ಈ ಸಂದರ್ಭದಲ್ಲಿ ನಿವೃತ್ತ ಉದ್ಯೋಗಿ ಕುಶಾಲಪ್ಪ ನಾಯ್ಕ ಬೀಡು ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎಡಮಂಗಲ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ದೀಕ್ಷಿತ್ ಮತ್ತು ಪೂಜಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರೈತ ಉತ್ಪನ್ನ ಕಂಪೆನಿಯ ಪ್ರತಿನಿಧಿ ತೀರ್ಥಾನಂದರು ಕೃಷಿಕರಿಗೆ ಕಂಪೆನಿಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನಿಂತಿಕಲ್ಲು ಕ್ಯಾಂಪ್ಕೋ ಜನಾರ್ಧನ್ ರವರಯ ಕ್ಯಾಂಪ್ಕೋ ಸಂಸ್ಥೆ ವತಿಯಿಂದ ನೀಡುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಸುಮಾ ನೂಚಿಲ, ನಿರ್ದೇಶಕರುಗಳಾದ ಪದ್ಮಯ್ಯ ನಾಯ್ಕ ಮುಳಿಯ, ಕಮಾಲಾಕ್ಷ ಹೊಳೆಕೆರೆ, ತ್ಯಾಗರಾಜ ಎಚ್. ಎಸ್. ಹೊಸಮನೆ, ಪುರಂದರ ರೈ ಬಳ್ಕಾಡಿ, ಚಂದ್ರಯ್ಯ ಮಜ್ಜಾರು, ರಾಘವ ಪೂಜಾರಿ ಜಾಲ್ತಾರು, ಕಾಂತು ದೇವಸ್ಯ, ಚಂದ್ರಾವತಿ ಕಟ್ಟಾ, ಚಂದ್ರಶೇಖರ ಕೇರ್ಪಡ, ಮಾಜಿ ನಿರ್ದೇಶಕರಾದ ಈಶ್ವರ ಜಾಲ್ತಾರು, ಶುಭದಾ ಎಸ್. ರೈ. ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ನವೀನ್ ಕುಮಾರ್ ಕೆ.ಆರ್., ಕುಂ‍ಞಣ್ಣ ಗೌಡ ಎ., ಅಶ್ವತ್ಥ್ ಜೆ., ಸೀತಾರಾಮ ಡಿ, ಗಂಗಾಧರ ಕೆ. ಸಹಕರಿಸಿದರು. ವಿಜಯ ರಾಮಣ್ಣ ಪ್ರಾರ್ಥಿಸಿದರು. ರಮೇಶ್ ಡಿ. ವರದಿ ವಾಚಿಸಿದರು. ನವೀನ್ ಕುಮಾರ್ ಸ್ವಾಗತಿಸಿ, ನಿರ್ದೇಶಕ ಅವಿನಾಶ್ ದೇವರ ಮಜಲು ವಂದಿಸಿದರು.
ಕಾರ್ಯನಿರ್ವಹಣಾಧಿಕಾರಿ ರಮೇಶ್ ಡಿ. ಕಾರ್ಯಕ್ರಮ ನಿರೂಪಿಸಿದರು.