ಪಂಜದಲ್ಲಿ ಪ್ರಶಿಕ್ಷಣ ವರ್ಗ ತರಬೇತಿ

0
159

ಅಧಿವಕ್ತಾ ಪರಿಷತನ ದಕ್ಷಿಣ ಕನ್ನಡ ಜಿಲ್ಲೆಯ ಒಂದು ದಿನದ ಪ್ರಶಿಕ್ಷಣ ವರ್ಗ ತರಬೇತಿಯು ಸುಳ್ಯ ದ ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ರವರ ಪಂಜದ ಸೆ.10 ರಂದು ಮನೆಯಲ್ಲಿ ನಡೆಯಿತು.

ಅಧಿವಕ್ತಾ ಪರಿಷತ್ ನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾದ ರವೀಂದ್ರನಾಥ ಪಿ ಯಸ್. ಕಾರ್ಯಕ್ರಮ ಉದ್ಘಾಟಿಸಿದರು. ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಮಂಗಳೂರಿನ ನ್ಯಾಯವಾದಿ ಶ್ರೀಮತಿ ಪುಷ್ಪಲತಾ, ಕಾರ್ಯಾಧ್ಯಕ್ಷ ರಾದ ಮಂಗಳೂರಿನ ನ್ಯಾಯವಾದಿ ಗುರುಪ್ರಸಾದ್ ಶೆಟ್ಟಿ, ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಇವರ ಮಾತೃಶ್ರೀ ಶ್ರೀಮತಿ ವಿಶಾಲಾಕ್ಷಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಿಕ್ಷಣ ವರ್ಗದ ಪ್ರಥಮ ಅವಧಿ ” ಲಾ ಆಫ್ ಏಜೆನ್ಸಿ” ಕುರಿತು ಅಧಿವಕ್ತಾ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷರಾದ ರವೀಂದ್ರನಾಥ ಪಿ ಯಸ್ ಇವರು ಕಾನೂನು ಮಾಹಿತಿ ನೀಡಿದರು. ದ್ವಿತೀಯ ಅವಧಿ “ಸಮಾನ ನಾಗರಿಕ ಸಂಹಿತೆ”ಕುರಿತು ಮಂಗಳೂರಿನ ನ್ಯಾಯವಾದಿ ನಂದಕಿಶೋರ್ ಇವರು ಮಾಹಿತಿ ನೀಡಿದರು.

ತೃತೀಯ ಅವಧಿಯನ್ನು ಸಾಮಾಜಿಕ ಕಾರ್ಯಕರ್ತರಾದ ನ.ಸೀತಾರಾಮ ಇವರು ಸಾಮಾಜಿಕ ಸಮಸ್ಯೆಗಳು ಮತ್ತು ವಕೀಲರ ಪಾತ್ರ ಮತ್ತು ಅಧಿವಕ್ತಾ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಮಂಗಳೂರಿನ ನ್ಯಾಯವಾದಿ ಜಯಪ್ರಕಾಶ್ ಇವರು ನಮ್ಮ ಕಾರ್ಯ ಚಟುವಟಿಕೆಗಳು ಕುರಿತು ಮಾತನಾಡಿದರು.ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಅಧಿವಕ್ತಾ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಆರ್ ಆನಂದಮೂರ್ತಿ ವಹಿಸಿದ್ದು ಅಧಿವಕ್ತಾ ಪರಿಷತ್ತಿನ ಕಾರ್ಯವನ್ನು ಸಮಾಜ ಜಾಗೃತಿ ಮತ್ತು ನೊಂದವರ ಧ್ವನಿಯಾಗುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಪ್ರಯತ್ನಿಸಬೇಕು ಎಂದು ಹೇಳಿದರು,ಅಧಿವಕ್ತಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಪುತ್ತೂರಿನ ನ್ಯಾಯವಾದಿ ಚೇತನ್ ನಾಯಕ್ ಇವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿ ಅಧಿವಕ್ತಾ ಪರಿಷತ್ತಿನ ಮಂಗಳೂರು ವಿಭಾಗ ಪ್ರಮುಖ್ ಮಂಗಳೂರಿನ ನ್ಯಾಯವಾದಿ ಜಗದೀಶ್ ಕಾಪುಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸುತ್ತಾ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಪ್ಪತ್ತೈದು ನ್ಯಾಯವಾದಿಗಳು ಭಾಗವಹಿಸಿದ್ದರು.ಕಾರ್ಯಕ್ರಮ ನಡೆಸಲು ಅವಕಾಶ ಮಾಡಿ ಕೊಟ್ಟು ಉಪಹಾರ ಮತ್ತು ಭೋಜನ ವ್ಯವಸ್ಥೆ ಮಾಡಿದ ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು ಇವರಿಗೆ ಸ್ಮರಣೆಕೆ ನೀಡಿ ಗೌರವಿಸಲಾಯಿತು.ಸುಳ್ಯ ವಕೀಲರ ಸಂಘದ ಕೋಶಾಧಿಕಾರಿ ಜಗದೀಶ್ ಡಿ ಪಿ ಕಾರ್ಯಕ್ರಮ ನಿರೂಪಿಸಿದರು.ಸುಳ್ಯದ ನ್ಯಾಯವಾದಿ ಸಂದೀಪ್ ವಳಲಂಬೆ, ಹರ್ಷಿತ್ ಕಾರ್ಜಾ, ಮಂಗಳೂರಿನ ನ್ಯಾಯವಾದಿ ಶುಕರಾಜ್ ಕೊಟ್ಟಾರಿ, ಬಂಟ್ವಾಳದ ನ್ಯಾಯವಾದಿ ವೀರೇಶ್ ಸಿದ್ಧಕಟ್ಟೆ ಸಹಕರಿಸಿದರು.

LEAVE A REPLY

Please enter your comment!
Please enter your name here