ಜೇಸಿಐ ಪಂಜ ಪಂಚಶ್ರೀ ರಜತ ಮಹೋತ್ಸವದ ಸವಿನೆನಪಿಗಾಗಿ ಪಂಜ ದೇವಳದ ಆವರಣದಲ್ಲಿ ಶಾಶ್ವತ ಗದ್ದೆ ನಿರ್ಮಾಣಕ್ಕೆ ಚಾಲನೆ‌

0
235

 

ಜೇಸಿಐ ಪಂಜ ಪಂಚಶ್ರೀ ಇದರ ರಜತ ಮಹೋತ್ಸವದ ಸವಿ ನೆನಪಿಗಾಗಿ ದಾನಿಗಳ ಸಹಕಾರ ದೊಂದಿಗೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಆಧುನಿಕ ವಿಧಾನದಲ್ಲಿ ಗದ್ದೆ ನಿರ್ಮಿಸುವ ವಿನೂತನ ಶಾಶ್ವತ ಕಾರ್ಯಕ್ರಮಕ್ಕೆ ಸೆ.23 ರಂದು ಚಾಲನೆ ನೀಡಲಾಯಿತು.

 

ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು,
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ , ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಕುದ್ವ,ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ,ಪೂರ್ವಾಧ್ಯಕ್ಷರಾದ ಶಶಿಧರ ಪಳಂಗಾಯ, ಸೋಮಶೇಖರನೇರಳ,ಸವಿತಾರ ಮುಡೂರು, ತೀರ್ಥಾನಂದ ಕೊಡೆಂಕಿರಿ,ದಯಾಪ್ರಸಾದ್ ಚೀಮುಳ್ಳು, ರಾಜೇಶ್ ಕಂಬಳ, ಲೋಕೇಶ್ ಆಕ್ರಿಕಟ್ಟೆ,ನಾಗಮಣಿ ಕೆದಿಲ, ಕಾರ್ಯದರ್ಶಿ ಕೌಶಿಕ್ ಕುಳ, ತೀರ್ಥಪ್ರಸಾದ ಪಲ್ಲತ್ತಡ್ಕ, ರಕ್ಷಿತ್ ಗೋಳಿಕಟ್ಟೆ ,ವಿಜೇಶ್ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅರ್ಚಕ ರಾಮಚಂದ್ರ ಭಟ್ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಶಾಶ್ವತ ಯೋಜನೆ:
ವಿನೂತನ ರೀತಿಯಲ್ಲಿ ಗದ್ದೆ ರಚನೆಗೊಳ್ಳಲಿದ್ದು ಪ್ರಾಣಿ, ಪಕ್ಷಿಗಳ ಉಪಟಳವನ್ನು ತಪ್ಪಿಸಲು ಗದ್ದೆಗೆ ಸಂಪೂರ್ಣ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಿ ದೇವಳಕ್ಕೆ
ಜೇಸಿಐ ಪಂಜ ಪಂಚಶ್ರೀ ಹಸ್ತಾಂತರ ಮಾಡಲಿದೆ.
ಗದ್ದೆ ಬೇಸಾಯದಿಂದ ದೇವಳದ ನೈವೇದ್ಯಕ್ಕೆ ಮತ್ತು ಭಕ್ತರಿಗೆ ಕದಿರು ವಿತರಣೆ ಮಾಡಲು ಈ ಯೋಜನೆ ಪೂರಕವಾಗಲಿದೆ. ಜೇಸಿಐ ಪಂಜ ಪಂಚಶ್ರೀಯ ಬೆಳ್ಳಿ ಹಬ್ಬದ ನೆನಪಿಗಾಗಿ ನಡೆಯುವ ‘ರಜತ ರಶ್ಮಿ’ಕಾರ್ಯಕ್ರಮದಲ್ಲಿ ಗದ್ದೆ ದೇವಳಕ್ಕೆ ಹಸ್ತಾಂತರ ಗೊಳ್ಳಲಿದೆ.
ರಜತ ಮಹೋತ್ಸವವು ನ.7 ರಿಂದ ನ.12 ತನಕ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಿಂದ ಜರುಗಲಿದೆ.

LEAVE A REPLY

Please enter your comment!
Please enter your name here