ಅ.2ರ ಗಾಂಧಿ ಜಯಂತಿ ದಿನ ಮುಳ್ಯ ಅಟ್ಲೂರು ಶಾಲೆಯಲ್ಲಿ ಸ್ಮಾರ್ಟ್ ತರಗತಿ ಉದ್ಘಾಟನೆ – ಸನ್ಮಾನ

0

 

 

ಅಜ್ಜಾವರ ಗ್ರಾಮದ ಮುಳ್ಯ‌-ಅಟ್ಲೂರು ಶಾಲಾ ಹಿರಿಯ ವಿದ್ಯಾರ್ಥಿ ಸಂಘ – ಸೆಲ್ಕೋ ಸೋಲಾರ್ ಸಂಸ್ಥೆ ಸಹಯೋಗದಲ್ಲಿ ಶಾಲೆಗೆ ನೀಡಲ್ಪಟ್ಟ ಸ್ಮಾರ್ಟ್ ತರಗತಿ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭ ಅ.2 ರಂದು ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ಅಟ್ಲೂರು ಸನ್ಮಾನ ನೆರವೇರಿಸಲಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸತ್ಯವತಿ ಬಸವನಪಾದೆ ಕಾರ್ಯಕ್ರಮ ಉದ್ಘಾಟಿಸುವರು.
ಸ್ಮಾರ್ಟ್ ಕ್ಲಾಸ್ ನ್ನು ರವಿಪ್ರಕಾಶ್ ಅಟ್ಲೂರು ಉದ್ಘಾಟಿಸುವರು.

ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀಕೃಷ್ಣ ಎಂ.ಎನ್., ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಚ್ಚುತ ಅಟ್ಲೂರು, ಪದೋನ್ನತಿ ಗೊಂಡ ಮುಖ್ಯ ಶಿಕ್ಷಕಿ ಧನಲಕ್ಷ್ಮಿ ಕುದ್ಪಾಜೆಯವರನ್ನು ಸನ್ಮಾನಿಸಲಾಗುವುದು.