ಮೇನಾಲ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ

0

 

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆಯು ಸೆ.30 ರಂದು ನಡೆಯಿತು.

 

 

ಬೆಳಗ್ಗೆ ಗಣಹೋಮ ಮತ್ತು ನಾಗತಂಬಿಲ, ಗುಳಿಗತಂಬಿಲ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನದಾನ ನಡೆಯಿತು. ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಮಹಾಪೂಜೆ ಮತ್ತು ದೇವಿ ಸೇವೆ ಹಾಗೂ ಅನ್ನದಾನ ನಡೆಯಿತು. ಕ್ಷೇತ್ರದ ಧರ್ಮದರ್ಶಿಗಳಾದ ಪದ್ಮನಾಭ ಸ್ವಾಮಿಗಳ ಮುಂದಾಳತ್ವದಲ್ಲಿ ಪೂಜಾ ಕಾರ್ಯ ನಡೆದವು.

ಮಧ್ಯಾಹ್ನ ‌ಮತ್ತು ರಾತ್ರಿ ಊರ ಹಾಗೂ ಪರವೂರ ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುವ.

ನವರಾತ್ರಿ ಉತ್ಸವದ ಪ್ರಯುಕ್ತ ಕ್ಷೇತ್ರವನ್ನು ಹೂ ಗಳಿಂದ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು.