ಸುಳ್ಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

0

 

ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ದಸರಾ ಉತ್ಸವ ಸಮಿತಿ ಸುಳ್ಯ ತಾಲ್ಲೂಕು ಇದರ 51ನೇ ವರ್ಷದ ಶ್ರೀ ಶಾರದಾ ಮಹೋತ್ಸವವು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಎದುರು ಇರುವ ಶ್ರೀ ಶಾರದಾಂಬ ಕಲಾವೇದಿಕೆಯಲ್ಲಿ ನಡೆಯಲಿದ್ದು ,
ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇಂದು ಸಂಜೆ ನಡೆಯಿತು.


ಡಾ. ಹರಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಸರ್ಕಲ್ ಜೋಗಿ ನಾರಾಯಣ ಕೇಕಡ್ಕ ಚಿದಾನಂದ ವಿದ್ಯಾನಗರ ನವೀನ್ ಬೆಂಗಳೂರು ವಿನಯ ಕಂಡಡ್ಕ ಸುರೇಶ್ ಜೈನ್, ಪ್ರದೀಪ್ ಕೆ.ಎನ್.’ ಗೋಕುಲದಾಸ್ ಉಪಸ್ಥಿತರಿದ್ದರು. ರವಿಚಂದ್ರ ಸ್ವಾಗತಿಸಿ, ಗೋಕುಲದಾಸ್ ಪ್ರಾಸ್ತವಿಕವಾಗಿ ಮಾತನಾಡಿದರು. ರಾಧಾಕೃಷ್ಣ ಬೂಡು ಕಾರ್ಯಕ್ರಮ ನಿರೂಪಣೆ ಮಾಡಿದರು.