ಆಲೆಟ್ಟಿ: ಕುಡೆಕಲ್ಲು ಕಾಲನಿ ಯಲ್ಲಿ ಆರೋಗ್ಯ ಸೋಮವಾರ ಕುರಿತು ಮಾಹಿತಿ ಕಾರ್ಯಾಗಾರ

0

 

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು,ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಐಇಸಿ ವಿಭಾಗದ ವತಿಯಿಂದ ಆರೋಗ್ಯ ಸೋಮವಾರ ಕುರಿತು ಮಾಹಿತಿ ಕಾರ್ಯಾಗಾರವು ಆಲೆಟ್ಟಿ ಗ್ರಾಮದ ಕುಡೆಕಲ್ಲು ಪ.ಜಾತಿ ಕಾಲನಿಯಲ್ಲಿ ಅ.3 ರಂದು ನಡೆಯಿತು.

ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಆರೋಗ್ಯ ಇಲಾಖೆಯ ಸವಲತ್ತುಗಳು ದಂತಭಾಗ್ಯ ಯೋಜನೆ, ತಂಬಾಕಿನ ದುಷ್ಪರಿಣಾಮಗಳ ಕುರಿತು ಮಾಹಿತಿನೀಡಲಾಯಿತು. ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ ಕಾರ್ಯಕ್ರಮ ಉದ್ಘಾಟಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ರವರು ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಲಾವಣ್ಯ ಸ್ವಾಗತಿಸಿ, ಯಶಸ್ವಿನಿ ವಂದಿಸಿದರು. ಆಶಾಕಾರ್ಯಕರ್ತೆಯರಾದ ರತ್ನಾವತಿ ಕುಡೆಕಲ್ಲು ಮತ್ತು ಉಷಾಕಿರಣ ಆಲೆಟ್ಟಿ ಸಹಕರಿಸಿದರು. ಕಾಲನಿಯ ನಿವಾಸಿಗಳಾದ ಮಾಜಿ ಪಂಚಾಯತ್ ಸದಸ್ಯೆ ಶ್ರೀಮತಿ ಸರೋಜಿನಿ ಕುಡೆಕಲ್ಲು ಮತ್ತು ಹಿರಿಯರಾದ ಶ್ರೀಮತಿ ಕಮಲ ರವರು ಅಭಿಪ್ರಾಯವ್ಯಕ್ತಪಡಿಸಿದರು.ಕಾಲನಿಯನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.