ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ರಿಗೆ ಸೂಪರ್ ಸಾಧಕಿ ಪ್ರಶಸ್ತಿ

0

 

ಸ್ವತಂತ್ರ ಮಾನ್ಯತೆ ಪಡೆದ ಶಾಲಾ ಶಿಕ್ಷಕರ ಒಕ್ಕೂಟದ ಪಸ್ಟ್ ಕರ್ನಾಟಕ ಸಂಸ್ಥೆ (ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರ ವೇದಿಕೆ) ಅಕ್ಟೋಬರ್ 1 2022 ರಂದು ಡಾ.ಎಸ್. ರಾಧಾಕೃಷ್ಣನ್ ಅವರ ಸ್ಮರಣಾರ್ಥ ಶಿಕ್ಷಕ್ ಸಮ್ಮಾನ್ 2022 ಅನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ಸೂಪರ್ ಸಾಧಕಿ ಪ್ರಶಸ್ತಿ ಸ್ವೀಕರಿಸಿದರು.

ವಿಧಾನಪರಿಷತ್ ಸದಸ್ಯ ಶ್ರೀ ಪುಟ್ಟಣ್ಣ ಅವರು ಪ್ರಶಸ್ತಿ ಪ್ರದಾನ ಮಾಡಿದರು .

ಡಾ.ಪ್ರಶಾಂತಿ ಶಶಿಕಾಂತ್ ಅವರು ಉಬರಡ್ಕ ಮಿತ್ತೂರು ಗ್ರಾಮದ ರಾಘವ ಬಿ ಮತ್ತು ನಾಗವೇಣಿ ಬಿ.ಆರ್.ಅವರ ಪುತ್ರಿ.

ಈ ಹಿಂದೆ ಅವರು ಎಲ್‌ಡ್ರಾಕ್, ಎಜುಕೇಶನ್ ಟುಡೆಯಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಮತ್ತು ಟೈಮ್ ಟು ಗ್ರೋ ಮಾಧ್ಯಮವು ಇತ್ತೀಚೆಗೆ ಅವರನ್ನು ಪ್ರಮುಖ ಪ್ರಾಂಶುಪಾಲರಾಗಿ ಗೌರವಿಸಿದೆ.

ಪ್ರಸ್ತುತ ಅವರು ಬೆಂಗಳೂರಿನ ಝೆನ್ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ