ದುಗ್ಗಲಡ್ಕದಲ್ಲಿ ಕೆಸರ್ಡ್ ಒಂಜಿ ದಿನ -ಕೆಸರು ಗದ್ದೆ ಹಗ್ಗಜಗ್ಗಾಟ, ಮಹಾಲಿಂಗೇಶ್ವರ ಫ್ರೆಂಡ್ಸ್ ಪುತ್ತೂರು ಮತ್ತು ನಾಗಶ್ರೀ ಫ್ರೆಂಡ್ಸ್ ಸುಳ್ಯ ವಿನ್ನರ್ಸ್

0

ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ಕೆಸರ್ಡ್ ಒಂಜಿ ದಿನ ಕ್ರೀಡಾ ಕೂಟ ಮತ್ತು ಕೆಸರುಗದ್ದೆ ಹಗ್ಗಜಗ್ಗಾಟ ನೀರಬಿದಿರೆ ಮದಕ ದಿ.ರಾಮಕೃಷ್ಣ ನಾಯಕ್ ರವರ ಗದ್ದೆಯಲ್ಲಿ ನ.6 ರಂದು ನಡೆಯಿತು.


ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಹಾಲಿಂಗೇಶ್ವರ ಫ್ರೆಂಡ್ಸ್ ಪುತ್ತೂರು ಪ್ರಥಮ, ಫ್ರೆಂಡ್ಸ್ ಪೊಳಲಿ ಬಿ.ದ್ವಿತೀಯ, ಫ್ರೆಂಡ್ಸ್ ಪೊಳಲಿ ಎ. ತೃತೀಯ ಮತ್ತು ಶಾಸ್ತಾರ ಫ್ರೆಂಡ್ಸ್ ನೆಲ್ಯಾಡಿ ಚತುರ್ಥ ಬಹುಮಾನ ಪಡೆದುಕೊಂಡರು.


ಮಹಿಳೆಯರ ವಿಭಾಗದಲ್ಲಿ ನಾಗಶ್ರೀ ಫ್ರೆಂಡ್ಸ್ ಸುಳ್ಯ ಪ್ರಥಮ, ಎಡಬ್ಲ್ಯೂಸಿ ಸುಳ್ಯ ದ್ವಿತೀಯ, ಸ್ವಾಮಿ ಕೊರಗಜ್ಜ ತಂಡ ಜಾಲ್ಸೂರು ತೃತೀಯ ಹಾಗೂ ಕುರಲ್ ತುಳುಕೂಟ ದುಗ್ಗಲಡ್ಕ ಚತುರ್ಥ ಬಹುಮಾನ ಪಡೆದುಕೊಂಡರು.
ಬಹುಮಾನ ವಿತರಣೆಯನ್ನು ಉಬರಡ್ಕ ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಎಸ್.ಗಂಗಾಧರ್, ನಿವೃತ್ತ ದೈಹಿಕ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು, ಸುಳ್ಯ ತಾ. ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಂಜುನಾಥ ಮೇಸ್ತ್ರಿ ಬಳ್ಳಾರಿ, ಹಗ್ಗಜಗ್ಗಾಟದ ನಿರೂಪಕರಾದ ಸುರೇಶ್ ಪಡಿಪಂಡ ಬಹುಮಾನ ವಿತರಣೆ ಮಾಡಿದರು. ವೇದಿಕೆ ಪ್ರಗತಿಪರ ಕೃಷಿಕ ಪುರುಷೋತ್ತಮ ಗೌಡ ಕೊಯಿಕುಳಿ, ಕ್ರೀಡಾಪಟು ನವೀನ್ ಭಾಗಮಂಡಲ ಉಪಸ್ಥಿತರಿದ್ದರು.ಸುಳ್ಯ ಎ.ಸಿ.ಎಫ್.ಪ್ರವೀಣ್ ಕುಮಾರ್ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು. ಮಿತ್ರ ಯುವಕ ಮಂಡಲದ ಅಧ್ಯಕ್ಷ ಚೇತನ್ ಕಲ್ಮಡ್ಕ ಅಧ್ಯಕ್ಷತೆ ವಹಿಸಿದ್ದರು.

ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ,ಅಧ್ಯಕ್ಷೆ ಶ್ರೀಮತಿ ನವ್ಯ ದಿನೇಶ್ ಗೌರವಾಧ್ಯಕ್ಷ ನಾರಾಯಣ ಟೈಲರ್,ಕಾರ್ಯದರ್ಶಿ ಮನೋಜ್ ಪಾನತ್ತಿಲ, ಯುವಕ ಮಂಡಲದ ಗೌರವಾಧ್ಯಕ್ಷ ದಿನೇಶ್ ಕೊಯಿಕುಳಿ, ಕಾರ್ಯದರ್ಶಿ ಪ್ರದೀಪ್ ಕೊಯಿಕುಳಿ,ಕೋಶಾಧಿಕಾರಿ ಚಿದಾನಂದ ಕೊಯಿಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರೀಡಾಕೂಟಕ್ಕೆ ಗದ್ದೆಯನ್ನು ಒದಗಿಸಿದ ಶುಭಕರ ನಾಯಕ್,ಶ್ರೀಮತಿ ಚಂದ್ರಕಲಾ, ಹಗ್ಗ ಜಗ್ಗಾಟದ ನಿರೂಪಕ ಸುರೇಶ್ ಪಡಿಪಂಡರವರನ್ನು ಗೌರವಿಸಲಾಯಿತು.


ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿದರು. ಶೇಖರ ಕುದ್ಪಾಜೆ ಬಹುಮಾನಿತರ ಪಟ್ಟಿ ವಾಚಿಸಿದರು.ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.