ಸುಳ್ಯದ ಓಡಬಾಯಿ ಬಳಿ ಅಪಘಾತ, ಸ್ಕೂಟಿ ಸವಾರನಿಗೆ ಗಾಯ

0


ಕಾರು ಹಾಗೂ ಸ್ಕೂಟಿ ಪರಸ್ಪರ ಡಿಕ್ಕಿ ಹೊಡೆದು, ಸ್ಕೂಟಿ ಸವಾರನಿಗೆ ಗಾಯಗಳಾದ ಘಟನೆ ಸುಳ್ಯದ ಓಡಬಾಯಿ ಬಳಿ ಸಂಭವಿಸಿದೆ.


ಪೈಚಾರು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಹೋಂಡಾ ಸ್ಕೂಟಿ ಸುಳ್ಯದಿಂದ ವಿನು ನಗರ ಬಳಿ ತಿರುಗುತ್ತಿದ್ದ ರಿಡ್ಜ್ ಕಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಸ್ಕೂಟಿ ಸವಾರನಿಗೆ ಗಾಯಗಳಾಗಿದ್ದು, ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.