ಹಿರಿಯರ ಕ್ರೀಡಾಕೂಟ: ದೇವಿಪ್ರಸಾದ್ ರೈ ಕೇನ್ಯ, ಸುಭಾಶ್ಚಂದ್ರ ರೈ ಬಾಳಿಲ‌ ರಾಷ್ಟ್ರ ಮಟ್ಟಕ್ಕೆ

0


ನ. 12ರಿಂದ ಮೈಸೂರ್ ನಲ್ಲಿ ನಡೆಯುತ್ತಿರುವ 42ನೇ ರಾಜ್ಯ ಮಾಸ್ಟರ್ಸ್ ಆತ್ಲೆಟಿಕ್ಸ್ ಚಾಂಪಿಯನ್ ಶಿಪ್ -2022 ರಲ್ಲಿ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಇಲಾಖೆ ಅಸೈಗೋಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇನ್ಯ ಗ್ರಾಮದ ದೇವಿಪ್ರಸಾದ್ ರೈ ಗೆಜ್ಜೆಯವರು 40+ ವಿಭಾಗದ 100 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಂತರರಾಷ್ಟ್ರೀಯ ಕ್ರೀಡಾಪಟು ಸುಭಾಸ್ಚಂದ್ರ ರೈ ಬಾಳಿರವರು 70 + ವಿಭಾಗದ 100 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದ ಕ್ರೀಡಾಕೂಟ 2023 ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿದೆ.