ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯ ಸುಳ್ಯ ಕನ್ನಡ ಸಂಭ್ರಮ -2022 ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ

0

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಮತ್ತು ಕೆವಿಜಿ ತಾಂತ್ರಿಕ ಮಹಾವಿದ್ಯಾಲಯ ಸುಳ್ಯ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಸಂಭ್ರಮ- 2022 ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 12/11/22 ರಂದು ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ ವಿ ಯವರು ಕಾರ್ಯಕ್ರಮವನ್ನು ಉದ್ದೇಶಿಸಿ “ಕನ್ನಡದ ಕಂಪನ್ನು ಬೀರುವಂತಹ ಇಂತಹ ಕಾರ್ಯಕ್ರಮಗಳು ಖಂಡಿತವಾಗಿಯೂ ಕನ್ನಡ ನಾಡು ನುಡಿಯ ಘನತೆಯನ್ನು ಹೆಚ್ಚಿಸಲು ಪೂರಕವಾಗಿದೆ. ಇದರ ಜೊತೆಗೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿರುವುದು ಸಂತೋಷದ ವಿಚಾರ ಹಾಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಈ ಮೂಲಕ ನಾನು ಶುಭ ಕೋರುತ್ತಿದ್ದೇನೆ” ಎಂದು ನುಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಮಾಜಿ ಪ್ರಾಂಶುಪಾಲರು ,ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಪಾಪ್ಯುಲರ್ ಎಜುಕೇಶನ್ (ರಿ) ಅರಂತೋಡು ಇದರ ಸಂಚಾಲಕರು ಆದ, ಪ್ರಸ್ತುತ 26ನೇ ಕನ್ನಡ ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿರುವಂತಹ ಶ್ರೀಯುತ ಕೆ.ಆರ್ ಗಂಗಾಧರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ “ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಇರುವುದರಿಂದ ಕನ್ನಡವನ್ನು ಉಳಿಸುವ ಅಗತ್ಯವಿಲ್ಲ ಬದಲಾಗಿ ಅದನ್ನ ಪೋಷಿಸಿ ಬೆಳೆಸುವಂತಹ ಅಗತ್ಯತೆ ಇಂದು ನಮ್ಮ ಮುಂದಿದೆ. ಹಾಗೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಾದ ನೀವುಗಳು ಪ್ರತಿಯೊಂದು ಅವಕಾಶವನ್ನು ಉಪಯೋಗಿಸಿಕೊಂಡು ಸಾಧನೆಯ ಪಥವನ್ನು ಸೇರಬೇಕು” ಎಂದು ಹಿತವಚನ ನುಡಿದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದಂತಹ ಶ್ರೀಯುತ ನಿತ್ಯಾನಂದ ಮುಂಡೋಡಿ ತಮ್ಮ ಹಿತವಚನಗಳೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಯುತ ಕೆ.ಆರ್ ಗಂಗಾಧರ ಅವರ ಪರಿಚಯ ಮತ್ತು ಸನ್ಮಾನ ಪತ್ರವನ್ನು ಕಾಲೇಜಿನ ಶೈಕ್ಷಣಿಕ ಮುಖ್ಯ ಅಧಿಕಾರಿ ಡಾ. ಉಮಾಶಂಕರ್ ಕೆ ಎಸ್ ರವರು ವಾಚಿಸಿದರು ಅದೇ ರೀತಿ ಶ್ರೀಯುತರನ್ನು ಕಾಲೇಜಿನ ವತಿಯಿಂದ ಸರ್ವಗಣ್ಯದಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಲಗೋರಿ ಪಂದ್ಯಾಟದ ಬಹುಮಾನ ವಿತರಣ ಕಾರ್ಯಕ್ರಮವನ್ನು ಕೂಡ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡದ ನಾಡು ನುಡಿಯ ವಿಶೇಷತೆಯನ್ನು ಎತ್ತರಕ್ಕೆ ಕೊಂಡೊಯಿದು ಕನ್ನಡ ಕಲಾ ಕ್ಷೇತ್ರಗಳಲ್ಲಿ ಸಾಧನೆಗೈದಂತಹ ಸಾಧಕರದ ಯಾಂತ್ರಿಕ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಕುಮಾರಿ ಚರಿಷ್ಮ ಕಡಪಳ ,ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಪ್ರೊಫೆಸರ್ ಕೃಷ್ಣರಾಜ ,ಅದೇ ರೀತಿ ಕೆವಿಜಿ ಐಟಿಐ ಕಾಲೇಜು ಸುಳ್ಯ ಇದರ ಕಚೇರಿ ಅಧೀಕ್ಷಕರಾದ ಶ್ರೀಯುತ ಭವಾನಿಶಂಕರ ಅಡ್ತಲೆ ಈ ಮೂವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ನೆಲೆಯಲ್ಲಿ ಶ್ರೀ ಭವಾನಿ ಶಂಕರ ಅಡ್ತಲೆಯವರು ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂದೇಶವನ್ನು ನೀಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .


ಕಾಲೇಜು ಪ್ರಾಂಶುಪಾಲರಾದ ಡಾ ಸುರೇಶ ವಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ”ವಿದ್ಯಾರ್ಥಿಗಳಾದ ನೀವುಗಳು ನವ ಚೈತನ್ಯದಿಂದ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಸದೃಢ ಸಮಾಜ ನಿರ್ಮಾಣಿಸುವಂತಹ ನವ ಶಕ್ತಿಗಳು ನೀವಾಗಬೇಕು”ಎಂದು ನುಡಿದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಸಂತೋಷ್ ಜಾಕೆ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು. ಜೆ ಪ್ರಾಂಶುಪಾಲರಾದ ಡಾ. ಸುರೇಶ .ವಿ ,ಕಾಲೇಜು ಉಪ ಪ್ರಾಂಶುಪಾಲರಾದ ಡಾ. ಶ್ರೀಧರ. ಕೆ,
ಕಾಲೇಜಿನ ಶೈಕ್ಷಣಿಕ ಮುಖ್ಯ ಅಧಿಕಾರಿ ಮತ್ತು ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ ಉಮಾಶಂಕರ್ ಕೆ ಎಸ್ ಹಾಗೆಯೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರುಗಳಾದ ಗುಣಶೇಖರ್ ಕೆ, ಕವನ್ ರೈ, ತುಷಾರ್ ಎಸ್, ಪುನೀತ್ ಹೆಚ್.ಆರ್, ದೀಕ್ಷಿತ ಮತ್ತು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಆಕಾಶ್ ಕೆ ಜೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಧಿಕಾರಿಗಳಾದಂತಹ ಪ್ರೊ. ಲೋಕೇಶ್ ಪಿ.ಸಿ ,ಡಾ. ಪ್ರಜ್ಞಾ ಎಂ ಆರ್ ಹಾಗೆಯೇ ಸಾಂಸ್ಕೃತಿಕ ಸಂಚಾಲಕರಾದಂತಹ ಪ್ರೊ. ಕೃಷ್ಣರಾಜ್ ರವರು ವಹಿಸಿದ್ದರು.

ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದ ವಿದ್ಯಾರ್ಥಿನಿಯರಾದ ಹರ್ಷಿತ ಆರ್ ಅನುಷಾ ಪಿ ಅನ್ವಿತಾ ಪ್ರಾರ್ಥನೆಗೈದರು. ಯಾಂತ್ರಿಕ ವಿಭಾಗದ ಉಪನಾಯಕ ಗುಣಶೇಖರ್ ಕೆ ಸರ್ವರನ್ನ ಸ್ವಾಗತಿಸಿದರು.
ವಿದ್ಯಾರ್ಥಿ ಸಂಘದ ಸದಸ್ಯ ಸಪ್ತಮಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು . ಗಣಕಯಂತ್ರ ವಿಭಾಗದ ಉಪನ್ಯಾಸಕಿ ಹಾಗೂ ಕಾಲೇಜಿನ ರಿಸರ್ಚ್ ಡೀನ್ ಆಗಿರುವಂತಹ ಡಾ. ಸವಿತಾ ಸಿ ಕೆ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕಿ ಡಾ ಲೇಖ ಬಿ ಎಂ ಮತ್ತು ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಾದ ಚರಿಷ್ಮಕಡಪಳ, ಗೌತಮ್ ಪೊನ್ನಣ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಕನ್ನಡ ನಾಡು ನುಡಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ತದನಂತರ ಸಿಂಚನ್ಸ್ ಆರ್ಕೆಸ್ಟ್ರಾವತಿಯಿಂದ ಅತ್ಯದ್ಭುತವಾದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರಗಿದ್ದವು.