ನೆಲ್ಲೂರು ಕೆಮ್ರಾಜೆ : ನಿವೇದಿತಾ ಮಹಿಳಾ ಜಾಗೃತಿ ಗ್ರಾಮ ಸಂಚಲನಾ ತಂಡ ರಚನೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನಿವೇದಿತಾ ಮಹಿಳಾ ಜಾಗೃತಿ ಗ್ರಾಮ ಸಂಚಲನ ತಂಡವನ್ನು ಎಲಿಮಲೆ ಜ್ಞಾನದೀಪ ಶಾಲೆಯ ಸಭಾ ಭವನ ದಲ್ಲಿ ರಚಿಸಲಾಯಿತು.

ಸಭೆಯಲ್ಲಿ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ, ನಿರ್ದೇಶಕರುಗಳಾದ ವೀಣಾ ಮೋಂಟಡ್ಕ, ಸವಿತಾ ಕಾಯರ, ಲೋಲಾಕ್ಷಿ ದಾಸನಕಜೆ ಹಾಗೂ ಅನುಷ್ಠಾನ ಸಮಿತಿಯ ಯಶೋದಾ ಬಾಳೆಗುಡ್ಡೆ ಉಪಸ್ಥಿತರಿದ್ದರು.

ಸಂಚಾಲಕಿಯಾಗಿ ಮೇಘಶ್ರೀ ಹಾಗೂ ಸಹ ಸಂಚಾಲಕಿಯಾಗಿ ಪವಿತ್ರ ಸುಳ್ಳಿ ಆಯ್ಕೆಗೊಂಡರು.