ಪಂಜ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನ

0

ಕರ್ನಾಟಕ ರಾಜ್ಯ ಪಶುಸಂಗೋಪನಾ ಇಲಾಖೆ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಸಹಕಾರದೊಂದಿಗೆ ಪಂಜ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಆಶ್ರಯದಲ್ಲಿ ಸಂಘದ ಕಾರ್ಯಕ್ಷೇತ್ರ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮಗಳಲ್ಲಿ’ ಉಚಿತ ಕಾಲು ಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನ’ಕ್ಕೆ ನ.21 ರಂದು ಪಂಜ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಚನಿಯಪ್ಪ ಗೌಡ ಕುಳ್ಳಕೋಡಿ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ ಸಿ, ಸತೀಶ್ ಬೊಳ್ಳಾಜೆ, ಉದಯ ಬಿಡಾರಕಟ್ಟೆ , ಪಶು ವೈದ್ಯಾಧಿಕಾರಿ ಡಾ. ಸೂರ್ಯನಾರಾಯಣ ಭಟ್,ಜಾ.ಕೃ.ಗ. ಕಾರ್ಯಕರ್ತ ರಕ್ಷಿತ್ ಗೋಳಿಕಟ್ಟೆ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆದರ್ಶ ಚಿದ್ಗಲ್ಲು , ಪ್ರಜ್ವಲ್ ಬಿಳಿಮಲೆ
ಸಂಘದ ಸಿಬ್ಬಂದಿಗಳು, ಮೊದಲಾದವರು ಉಪಸ್ಥಿತರಿದ್ದರು.