ಸ್ನೇಹ ಶಾಲೆಯ ಕೃತಿಗೆ ಪ್ರೋತ್ಸಾಹಕ ಬಹುಮಾನ

0
3

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಆಜಾದೀಕಾ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ೭೫ ದಿನಗಳಲ್ಲಿ ೭೫ ಅಪ್ರಕಾಶಿತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳ ಸಂಪಾದಿತ ಕೃತಿಗೆ ಬೆಂಗಳೂರಿನ ಕನ್ನಡ ಗೆಳೆಯರ ಬಳಗವು ಪುಸ್ತಕ ಬಹುಮಾನದ ವಿಭಾಗದಲ್ಲಿ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆ ಮಾಡಿದೆ. ಒಂದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರದೊಂದಿಗೆ ಮುಂದಿನ ಡಿಸೆಂಬರ್ ೧೨ ರಂದು ಬೆಂಗಳೂರಲ್ಲಿ ಗೌರವಿಸಲಾಗುವುದೆಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here