ನ.28 : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿದ್ದ ಉತ್ಸವ ಮೂರ್ತಿಯನ್ನು ಕೇರ್ಪಡ ದೇವಸ್ಥಾನಕ್ಕೆ ಹಿಂದಿರುಗಿಸುವ ಕಾರ್ಯಕ್ರಮ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಈ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನಾಚಿಂತನೆಯ ಪ್ರಕಾರ ಕಂಡುಬಂದಂತೆ ಶ್ರೀ ಕ್ಷೇತ್ರದಲ್ಲಿರುವ ಉತ್ಸವ ಮೂರ್ತಿಯನ್ನು ಹಿಂದಿರುಗಿಸುವ ಕಾರ್ಯಕ್ರಮವು ನ.28 ರಂದು ನಡೆಯಲಿರುವುದು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿರುವುದು.
ಬೆಳಿಗ್ಗೆ ಗಂಟೆ 6.30 ರಿಂದ ದೇವತಾ ಪ್ರಾರ್ಥನೆ,ಮಹಾಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕ ನಡೆಯಲಿರುವುದು.
ನಂತರ ಶ್ರೀ ಕೇರ್ಪಡ ಮಹಿಷಮರ್ಧಿನಿ ಕ್ಷೇತ್ರದ ಉತ್ಸವ ಮೂರ್ತಿಯನ್ನು ಕೇರ್ಪಡ ಕ್ಷೇತ್ರಕ್ಕೆ ಸಮರ್ಪಿಸುವುದು.
ಬಳಿಕ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.
ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.