ಎನ್.ಎಂ.ಸಿ. ಸಮಾಜ ಕಾರ್ಯ ವಿಭಾಗದಿಂದ ಸಮುದಾಯ ಅರಿವೂ ಕಾರ್ಯಕ್ರಮ

0

ವಿಶ್ವ ಏಡ್ಸ್ ದಿನದ ಅಂಗವಾಗಿ ಸುಳ್ಯ ನೆಹರು ಮೆಮೊರಿಯಲ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿಧ್ಯಾರ್ಥಿಗಳ ಕ್ಷೇತ್ರ ಕಾರ್ಯ ಸಂಸ್ಥೆಗಳಾದ ಗ್ರಾಮ ಪಂಚಾಯತ್ ಮಂಡೆಕೋಲು ಹಾಗೂ ಗ್ರಾಮಪಂಚಾಯತ್ ಅರಂತೋಡು ವ್ಯಾಪ್ತಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಅರಿವು ಮೂಡಿಸುವ ಕೆಲಸವನ್ನು ತೃತೀಯ ಸಮಾಜ ಕಾರ್ಯ ಪದವಿ ವಿಭಾಗದ ವಿದ್ಯಾರ್ಥಿಗಳು ಹಮ್ಮಿಕೊಂಡರು.
ಈ ಸಂಧರ್ಬದಲ್ಲಿ ವಿಧ್ಯಾರ್ಥಿಗಳು ಮನೆಭೇಟಿ, ಅಂಗಡಿ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿ ಪತ್ರಗಳನ್ನು ಹಂಚಿ ಮಾಹಿತಿ ಕೊಡುವುದರೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.