ಸುದ್ದಿ ನ್ಯೂಸ್ ಸುಳ್ಯ ಯೂಟ್ಯೂಬ್ ಚಾನಲ್
50 ಸಾವಿರ ಚಂದಾದಾರರು -ಕೇಕ್ ಕತ್ತರಿಸಿ ಸಂಭ್ರಮಾಚರಣೆ

0

ಸುದ್ದಿ ಬಿಡುಗಡೆ ಸುಳ್ಯ ವಾರ ಪತ್ರಿಕೆಯ ಅಂಗ ಸಂಸ್ಥೆಯಾಗಿರುವ ಸುದ್ದಿ ನ್ಯೂಸ್ ಸುಳ್ಯ ಯೂಟ್ಯೂಬ್ ಚಾನಲ್ ಇದೀಗ 50 ಸಾವಿರಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು, ವೀಕ್ಷಕರಿಗೆ ನೈಜ ಮಾಹಿತಿಯನ್ನು ನೀಡುತ್ತಿದೆ.
೫೦ ಸಾವಿರ ಚಂದಾದಾರರನ್ನು ಹೊಂದಿದ ಹಿನ್ನಲೆಯಲ್ಲಿ ಸಂಭ್ರಮ ಕಾರ್ಯಕ್ರಮ ಶ್ರೀ ಹರಿ ಬಿಲ್ಡಿಂಗ್‌ನಲ್ಲಿರುವ ಸುದ್ದಿ ಸುಳ್ಯ ಆಫೀಸ್‌ನಲ್ಲಿ ನಡೆಯಿತು.
ಸುದ್ದಿ ಸಮೂಹ ಸಂಸ್ಥೆಗಳ ಸಂಪಾದಕರಾದ ಡಾ|ಯು.ಪಿ.ಶಿವಾನಂದರವರು ಕೇಕ್ ಕತ್ತರಿಸಿ ಸಂಭ್ರಮಾಚರಣೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್, ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.