ಯುವಜನ ಸಂಯುಕ್ತ ಮಂಡಳಿ ಸುಳ್ಯದಲ್ಲಿ ದಿವ್ಯಾಂಗ ಚೇತನರ ಯೋಜನೆಗಳ ಮಾಹಿತಿ

0

ಸುಳ್ಯ ತಾಲ್ಲೂಕು ಯುವಜನ ಸಂಯುಕ್ತ ಮಂಡಳಿ(ರಿ.) ಇದರ ಮಾಸಿಕ ಸಭೆಯ ಸಂದರ್ಭ ಮಂಡಳಿಯ ನಿರ್ದೇಶಕ ಹಾಗೂ ದ.ಕ.&ಉಡುಪಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಮಾಜಿ ನೋಡಲ್ ಅಧಿಕಾರಿ, ಶ್ರೀ.ಪಿ.ವಿ.ಸುಬ್ರಮಣಿ ವಿಶ್ವ ದಿವ್ಯಾಂಗ ಚೇತನರ ದಿನಾಚರಣೆ 2022 ಅಂಗವಾಗಿ
ವಿಶೇಷ ಚೇತನರ ದಿನಾಚರಣೆ ಮತ್ತು ಅವರಿಗಿರುವ ಸೌಲಭ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು, ಜೊತೆಗೆ ವಿಶೇಷ ಚೇತನರಿಗೆ ಅನುಕಂಪ ನೀಡದೆ ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಅವಕಾಶ ಕಲ್ಪಿಸಲು ಸ್ವ ರಚಿತ ಹಾಡಿನ ಮೂಲಕ ತಿಳಿಸಿದರು.

ಈ ಸಂಧರ್ಭ ಮಂಡಳಿಯ ಅಧ್ಯಕ್ಷರಾದ ತೇಜಸ್ವಿ ಕಡಪಲ, ಗೌರವ ಸಲಹೆಗಾರರಾದ ಶಂಕರ್ ಪೆರಾಜೆ, ದಯಾನಂದ ಕೇರ್ಪಳ ಕಾರ್ಯದರ್ಶಿ ಸಂಜಯ್ ನೆಟ್ಟಾರು, ಕೋಶಾಧಿಕಾರಿ ಮುರಳಿ ಹಾಗೂ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.