ಡಿ.20, 21,22 ರಂದು ಆದಿಚುಂಚನಗಿರಿ ಮಠಾದೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಸುಳ್ಯ ತಾಲೂಕಿನಲ್ಲಿ ವಾಸ್ತವ್ಯ: ಅರಂತೋಡಿನಲ್ಲಿ ಪೂರ್ವಾಭಾವಿ ಸಭೆ

0

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಧರ್ಮ ಜಾಗೃತಿ- ಗ್ರಾಮ ಭೇಟಿ ಅಭಿಯಾನದ ಅಂಗವಾಗಿ ಅರಂತೋಡು ನೆಹರೂ ಮೆಮೊರಿಯಲ್ ಕಾಲೇಜು ಸೇರಿದಂತೆ ತಾಲೋಕಿನ ವಿವಿಧ ಭಾಗಗಳಿಗೆ ಡಿ.20, 21, 22 ರಂದು ಭೇಟಿ ನೀಡಲಿದ್ದು, ಶ್ರೀಗಳ ಪಾದಪೂಜೆ ಮತ್ತು ಭೇಟಿ ಕಾರ್ಯಕ್ರಮವನ್ನು ಅದ್ದೂರಿ ಯಾಗಿ ನೆರವೇರಿಸುವ ಬಗ್ಗೆ ಪೂರ್ವಬಾವಿ ಸಭೆಯನ್ನು ದಿನಾಂಕ ಡಿ.4. ಭಾನುವಾರ ಸಂಜೆ “ಸಿರಿ ಸೌಧ” ಸಭಾಂಗಣದಲ್ಲಿ ನಡೆಯಿತು. ಸಭೆಯ ವೇದಿಕೆಯಲ್ಲಿ ಅರೆಭಾಷೆ ಆರಂತೋಡು ಮಂಡಲದ ಎಲ್ಲಾ ಗ್ರಾಮ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಅಲ್ಲದೆ ವೇದಿಕೆಯಲ್ಲಿ ಪ್ರಮುಖರಾದ ಕೆ ಆರ್ ಗಂಗಾಧರ್,ಡಾ.ಡಿ ವಿ ಲೀಲಾಧರ್, ಎನ್ ಎ ಜ್ಞಾನೇಶ್, ಹರೀಶ್ ಕಂಜಿಪಿಲಿ, ತೀರ್ಥರಾಮ ಅಡ್ಕಬಳೆ, ಸಂತೋಷ್ ಕುತ್ತಮೊಟ್ಟೆ, ತೇಜಪ್ರಸಾದ್ ಅಮೆಚೂರು, ರಜತ್ ಅಡ್ಕಾರು, ಡಾ ಲಕ್ಮೀಶ, ಎ.ವಿ ತೀರ್ಥರಾಮ ಚಂದ್ರಶೇಖರ ಪೇರಾಲು, ಸೋಮಶೇಖರ್ ಕೊಯಿಂಗಾಜೆ,ವಾರಿಜ ಕುರುಂಜಿ ರಮಾನಂದ ಬಾಳೆಕಾಜೆ ಅನಂತ ಊರುಬೈಲು ಹರಿಣಿ ದೇರಾಜೆ, ಪ್ರವೀಣ್ ಮಜಿಕೋಡಿ ಮೊದಲಾದವರು

ಕಾರ್ಯಕ್ರಮದ ರೂಪು ರೇಷಗಳನ್ನು ತಿಳಿಸಿದರು ಪೆರಾಜೆ ಆರಂತೋಡು ತೊಡಿಕಾನ ಸಂಪಾಜೆ ಚೆಂಬು ಮರ್ಕಂಜ ಗ್ರಾಮದ ಗೌಡ ಕುಟುಂಬದ ಸದಸ್ಯರು ಭಾಗವಹಿಸಿ ಸಲಹೆ ಗಳನ್ನು ನೀಡಿದರು ಮಹಾಸ್ವಾಮೀಜಿಗಳು ಮೂರು ದಿನಗಳನ್ನು ಸುಳ್ಯ ತಾಲೊಕಿನಲ್ಲಿ ಕಳೆಯಲಿದ್ದು ತಾಲೋಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.