ಶ್ರೀ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು : ವಾರ್ಷಿಕೋತ್ಸವ ಸಮಾರಂಭ

0

ಶ್ರೀ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಸುಳ್ಯದ ವಾರ್ಷಿಕೋತ್ಸವ ಸಮಾರಂಭವು ಡಿಸೆಂಬರ್ 5 ರಂದು ನಡೆಯಿತು. ಸಮಾರಂಭದ ಮುಖ್ಯ ಅತಿಥಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಿರೀಶ್ ಭಾರದ್ವಾಜ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಡಾ. ಶ್ವೇತ ಮಡಪ್ಪಾಡಿ ಯವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ದ .ಕ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯರವರು ವಹಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ 40 ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಸೇವೆಯನ್ನು ಸಲ್ಲಿಸಿ ನಿವೃ ತ್ತರಾದ ಶ್ರೀಮತಿ ಹೇಮಾ ಪ್ರಭಾರವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.ದ್ವಿತೀಯ ಪಿ.ಯು.ಸಿ.ಯ ಕಲಾವಿಭಾಗದಲ್ಲಿ ರಾಜ್ಯಕ್ಕೆ ಒಂಬತ್ತನೇ ಸ್ಥಾನ ಪಡೆದ ಕುಮಾರಿ ಲಿಪಿ ಶ್ರೀ ಯವರಿಗೆ ಆಡಳಿತ ಮಂಡಳಿಯ ವತಿಯಿಂದ ಒಂದು ಪವನಿನ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು . ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ತುಳಸಿ, ಶ್ರೀಪಾ, ತೃಪ್ತಿ ಮತ್ತು ತರಬೇತಿಯನ್ನು ನೀಡಿದ ದೈಹಿಕ ಶಿಕ್ಷಣ ಉಪನ್ಯಾಸಕ ಬಾಲಚಂದ್ರ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದ ಕ ಗೌಡ ವಿದ್ಯಾಸಂಘ ದ ಪ್ರಧಾನ ಕಾರ್ಯದರ್ಶಿಗಳಾದ ಡಾ ರೇವತಿ ನಂದನ್, ಖಜಾಂಜಿ ಮಾಧವ ಗೌಡ ಬೆಳ್ಳಾರೆ ನಿರ್ದೇಶಕರುಗಳಾದ ಶ್ರೀಮತಿ ತಂಗಮ್ಮ ಕೆ ಎಸ್, ಶ್ರೀಮತಿ ಲೋಕೇಶ್ವರಿ ವಿನಯಚಂದ್ರ ಮತ್ತು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಜ್ಯೋತ್ಸ ಕೆ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಕೆ ಸ್ವಾಗತಿಸಿದರು.

ಮುಖ್ಯೋಪಾಧ್ಯಾಯನಿ ಶ್ರೀಮತಿ ಭಾರತಿ ಪಿ ವರದಿ ವಾಚನ ಮಾಡಿದರು. ಉಪನ್ಯಾಸಕ ಪ್ರಸನ್ನ ಎನ್ ಹೆಚ್ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪ್ರಭಾವತಿ ಎಸ್ ರವರು ಅಭಿನಂದನಾ ಭಾಷಣ ಮಾಡಿದರು. ಉಪನ್ಯಾಸಕ ದಾಮೋದರ ಎನ್ ಮತ್ತು ಪದವೀಧರ ಶಿಕ್ಷಕಿ ಶ್ರೀಮತಿ ಗಾಯತ್ರಿ ಬಹುಮಾನ ವಿತರಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪನ್ಯಾಸಕಿ ಶ್ರೀಮತಿ ಸ್ವರ್ಣಕಲಾ.ಎಸ್ ರವರು ವಂದಿಸಿದರು. ವಿದ್ಯಾರ್ಥಿನಿಯರಾದ ಸ್ವಸ್ತಿಶ್ರೀ ರೈ ಮತ್ತು ಸಾತ್ವಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭೋದಕ, ಬೋಧಕೇತರ, ಪೋಷಕರು, ಹಳೆ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಅಪರಾಹ್ನ ವಿದ್ಯಾರ್ಥಿನಿಯರಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು.