ಶಿವಪ್ರಕಾಶ್ ಗುರುಸ್ವಾಮಿ ಅಡ್ಪಂಗಾಯ ಜನಜಾಗೃತಿ ವೇದಿಕೆಯ ಅಜ್ಜಾವರ ವಲಯಾಧ್ಯಕ್ಷರಾಗಿ ಆಯ್ಕೆ

0

ಜನಜಾಗೃತಿ ವೇದಿಕೆಯ ಅಜ್ಜಾವರ ವಲಯಾಧ್ಯಕ್ಷರಾಗಿ ಶಿವಪ್ರಕಾಶ ಅಡಪಂಗಾಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಡಪಂಗಾಯ ಇದರ ಸ್ಥಾಪಕ ಅಧ್ಯಕ್ಷರಾಗಿರುವ ಶಿವಪ್ರಕಾಶ್ ಗುರುಸ್ವಾಮಿ ಅಡ್ಪಂಗಾಯರು ಜನಜಾಗೃತಿ ವೇದಿಕೆಯ ಅಜ್ಜಾವರ ವಲಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳಾಗಿ ಚಂದ್ರಜಿತ್ ಮಾವಂಜಿ, ಸುಬ್ಬಣ್ಣ ಪಾಟಲಿ, ಅನಿಲ್ ತೊಟ್ಟೆಪಾಡಿ, ನಿರಂಜನ್ ಕರ್ಲಪ್ಪಾಡಿ, ಸತೀಶ್ ಕಾಂತಮಂಗಲ, ಸುಧೀರ್ ಕಾಂತಮಂಗಲ, ಸದಸ್ಯರಾಗಿ ಭವಾನಿ ಶಂಕರ್ ಕಲ್ಲಡ್ಕ, ಪ್ರವೀಣ್ ಪೇರಾಲು, ರಮೇಶ್ ಮುಳ್ಯ, ಸೀತಾರಾಮ ಅಜ್ಜಾವರ, ಲೀಲಾವತಿ ಪೇರಾಲು ಆಯ್ಕೆಯಾಗಿರುತ್ತಾರೆ. ಜನಜಾಗೃತಿ ವಲಯ ಅಧ್ಯಕ್ಷರ ಆಯ್ಕೆ ಸಂದರ್ಭ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಮತ್ತು ನಿಕಟ ಪೂರ್ವ ತಾಲೂಕ ಅಧ್ಯಕ್ಷರಾದ ಮಹೇಶ್ ರೈ ಮೇನಾಲ, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ, ಅಜ್ಜಾವರ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ನವ ಜೀವನ ಸಮಿತಿಯ ಸದಸ್ಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು