ಸುಬ್ರಹ್ಮಣ್ಯ : ರಾಷ್ಟ್ರ ಧ್ವಜ ಕಟ್ಟೆಯಲ್ಲಿ ಬದಲಿ ಧ್ವಜ ಹಾರಿಸಿದರೆಂಬ ಆರೋಪ, ಕ್ರಮಕ್ಕೆ ಒತ್ತಾಯಿಸಿ ಸುಬ್ರಹ್ಮಣ್ಯ ಕಾಂಗ್ರೆಸ್ ದೂರು

0
548

p>

ಕುಕ್ಕೆ ಶ್ರೀ ಸುಬ್ರಹ್ಮಣ ದೇವಸ್ಥಾನದ
ರಾಷ್ಟ್ರ ಧ್ವಜ ಕಟ್ಟೆಯಲ್ಲಿ ಬದಲಿ ಧ್ವಜ ಹಾರಿಸಿದರೆಂಬ ಆರೋಪದಡಿಯಲ್ಲಿ ಬದಲಿ ಧ್ವಜ ಹಾರಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸುಬ್ರಹ್ಮಣ್ಯ ಗ್ರಾಮ ಕಾಂಗ್ರೆಸ್ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಯ ಎದುರಿನ ರಾಷ್ಟ್ರ ಕಟ್ಟೆಯಲ್ಲಿ ಜಾತ್ರಾ ಸಮಯದಲ್ಲಿ ಬದಲಿ ಧ್ವಜವನ್ನು ಅಳವಡಿಸಿ ಹಾರಾಟ ನಡೆಸಿರುವುದು ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಹಾಗೂ ಪ್ರತ್ಯೇಕವಾಗಿ ಹಲವರು ನೋಡಿರುವುದು ಕಂಡು ಬಂದಿದೆ. ಈ ಧ್ವಜ ಅಳವಡಿಕೆಯನ್ನು ದೇವಳದ ಆಡಳಿತ ವರ್ಗದ ವ್ಯಕ್ತಿ ಮಾಡಿರುವುದು ಕಂಡು ಬಂದಿರುವುದರಿಂದ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸಬೇಕೆಂದು ಸುಬ್ರಹ್ಮಣ್ಯ ಗ್ರಾಮ ಕಾಂಗ್ರೆಸ್ ಸಮಿತಿಯವರು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here