ಪೈಚಾರು : ಕರ್ನಾಟಕದ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆ

0

ಕ. ರಾ. ರೈತ ಸಂಘ ಸುಳ್ಯ ತಾಲೂಕು ಘಟಕದ ಸಭೆಯು ಪೈಚಾರು ಕಚೇರಿಯಲ್ಲಿ ಡಿ. 5 ರಂದು ನಡೆಯಿತು.

ಚೆಂಬು ಗ್ರಾಮದ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಅಡಿಕೆ ಎಲೆ ಹಳದಿ ರೋಗದ ಸ್ವಯಂ ಘೋಷಿತ ಭರ್ತಿ ಮಾಡಿದ ಅರ್ಜಿ ಫಾರಂನ್ನು ತಾಲೂಕು ಘಟಕಕ್ಕೆ ಹಸ್ತಾಂತರಿಸಿದರು.

ಮರ್ಕಂಜ ಗ್ರಾಮ ಘಟಕದ ಕಾರ್ಯದರ್ಶಿ ಸುದರ್ಶನ್ ಕೊಯಿಂಗೋಡಿ ಹಾಗೂ ದ. ಕ ಸಂಪಾಜೆ ಘಟಕದ ಅಧ್ಯಕ್ಷರಾದ ವಸಂತ ಪೆಲತ್ತಡ್ಕ ಅವರು ಭರ್ತಿ ಮಾಡಿದ ಅರ್ಜಿ ಫಾರಂನ್ನು ತಾಲೂಕು ಘಟಕಕ್ಕೆ ಹಸ್ತಾಂತರಿಸಿದ್ದಾರೆ.

ಕಂಪ್ಯೂಟರ್ ಎಕ್ಸೆಲ್ ಹಾಳೆಯಲ್ಲಿ ಮುದ್ರಿಸಿ ಡಾ. ಪ್ರಕಾಶ್ ಕಮ್ಮರಡಿ ಅವರನ್ನು ಕರೆಸಲು ಉಳಿದ ಗ್ರಾಮಗಳಾದ ಆಲೆಟ್ಟಿ, ಅರಂತೋಡು, ತೊಡಿಕಾನ, ಸಂಪಾಜೆ, ಮಡಪ್ಪಾಡಿ, ಉಬರಡ್ಕ ಮಿತ್ತೂರು ಗ್ರಾಮ ಘಟಕದವರು ಕೂಡಲೇ ಭರ್ತಿ ಮಾಡಿದ ಅರ್ಜಿ ಫಾರಂನ್ನು ಹಸ್ತಾಂತರಿಸಬೇಕೆಂದು ಸಂಘಟಕರು ತಿಳಿಸಿದ್ದಾರೆ.