ಸುಳ್ಯ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 28ನೇ ವರ್ಷದ ದೀಪೋತ್ಸವಕ್ಕೆ ಕೆಪಿಸಿಸಿ ಕಾರ್ಯದರ್ಶಿ ಹೆಚ್.ಎಂ. ನಂದಕುಮಾರ್ ಭೇಟಿ

0

ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ) ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 28ನೇ ವರ್ಷದ ದೀಪೋತ್ಸವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯದರ್ಶಿ, ಉದ್ಯಮಿ ಹೆಚ್.ಎಂ. ನಂದಕುಮಾರ್ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಜನಾರ್ಧನ ದೋಳ, ಗೌರವಾಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ, ರಾಮಕೃಷ್ಣ ಎ ನ್ಯಾಯವಾದಿ, ಅವಿನ್ ಪಡ್ಡಂಬೈಲು, ಸತೀಶ್ ಕಾನತ್ತಿಲ, ಶಶಿಧರ ಎಂ.ಜೆ, ಭವಾನಿಶಂಕರ್ ಕಲ್ಮಡ್ಕ, ಸುಧೀರ್ ರೈ ಮೇನಾಲ, ಭಾಗೀಶ್ ಕೆ.ಟಿ. ಹಾಗೂ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.