ಡಿ.20,21 : ಬೆಳ್ಳಾರೆ ಕೊಳಂಬಳ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರಾಯಶ್ಚಿತ್ತ ಪರಿಹಾರ ಕಾರ್ಯ

0

ಬೆಳ್ಳಾರೆಯ ದೇವಿನಗರ ಕೊಳಂಬಳ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದೇರೆಬೈಲು ತಂತ್ರಿ ಶ್ರೀ ಪತಂಜಲಿ ಶಾಸ್ತ್ರಿ ಮುಕ್ಕೂರು ಇವರ ನೇತೃತ್ವದಲ್ಲಿ ಪ್ರಾಯಶ್ಚಿತ್ತ ಪರಿಹಾರ ಕಾರ್ಯಗಳು ಡಿ.20 ಮತ್ತು ಡಿ.21 ರಂದು ನಡೆಯಲಿದೆ.
ಡಿ.20 ರಂದು ಸಂಜೆ ಸ್ವಸ್ತಿ,ಪುಣ್ಯಹವಾಚನ, ಬಾಧಾ,ಉಚ್ಛಾಟನೆ,ಪ್ರೇತಾವಾಹನೆ,ಅಘೋರ ಹೋಮ ನಡೆಯಲಿದೆ.
ಡಿ.21 ರಂದು ಬೆಳಿಗ್ಗೆ ಗಣಪತಿ ಹೋಮ, ದುರ್ಗಾ ಹೋಮ, ತಿಲಹೋಮ,ರಕ್ತೇಶ್ವರಿ ಅನುಜ್ಞಾ ಕಲಶ,ಬಾಲಾಲಯ ಪ್ರತಿಷ್ಠೆ ನಡೆಯಲಿದೆ.
ಆ ಪ್ರಯುಕ್ತ ದೈವಸ್ಥಾನದಲ್ಲಿ ನಡೆಯುವ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ,ಶ್ರೀ ದೈವಗಳ ಪ್ರಸಾದವನ್ನು ಸ್ವೀಕರಿಸಿ,ದೈವಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಿವಾಕರ ರೈ ಮರಿಕೇಯಿ ತಿಳಿಸಿದ್ದಾರೆ.