ನಿಡ್ವಾಳ ದೇವಳದಲ್ಲಿ ನಾಗನ ಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ

0

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಾಗನಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ ಡಿ.25 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಕಾರ್ಯದರ್ಶಿ ಗುರುಪ್ರಸಾದ್ ತೋಟ, ದೇವಳದ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜ ಪಲ್ಲೋಡಿ , ಕಾರ್ಯದರ್ಶಿ ಕುಸುಮಾಧರ ಕರಿಮಜಲು,ವಿವಿಧ ಸಮಿತಿಗಳ ಸಂಚಾಲಕರು,ಪದಾಧಿಕಾರಿಗಳು ಸದಸ್ಯರು,ಭಕ್ತಾದಿಗಳು ಉಪಸ್ಥಿತರಿದ್ದರು. ವೇದ‌ಮೂರ್ತಿ ನಾರಾಯಣ ಆಸ್ರಣ್ಣ ರವರು ವೈದಿಕ ವಿಧಿವಿಧಾನಗಳನ್ನು ಮತ್ತು ನಿರ್ಮಾಣದ ಮಾರ್ಗದರ್ಶನವನ್ನು ಶಿವರಾಮ‌ ಶಾಸ್ತ್ರಿ ಆಚಲಿರವರು ನೆರವೇರಿಸಿದರು.ದೇವಾಲಯದ ಪುನರ್ ನಿರ್ಮಾಣ ಕಾರ್ಯವು ಸುಮಾರು ಎರಡು ಕೋಟಿ ವೆಚ್ಚದಲ್ಲಿ
ನಡೆಯಲಿದೆ.