ಕೆ.ವಿ.ಜಿ.‌ಮೆಡಿಕಲ್ ಕಾಲೇಜಿನಲ್ಲಿ ಕ್ರಿಸ್ಮಸ್

0

ಕೆ.ವಿ.ಜಿ ನರ್ಸಿಂಗ್ ಸಂಸ್ಥೆಗಳ ವತಿಯಿಂದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿಸ್‌ ಮಸ್ ಹಬ್ಬದ ಕಾರ್ಯಕ್ರಮವನ್ನು ಡಿ. 24ರಂದು ಆಯೋಜಿಸಲಾಗಿತ್ತು. ಎ.ಇ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಕ್ರಿಸ್ ಮಸ್ ಗೋದಲಿಯನ್ನು ಉದ್ಘಾಟಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಎ.ಒ.ಎಲ್.ಇ. ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿಕೆ ನಟರಾಜನ್, ಎ.ಒ.ಎಲ್.ಇ. ನಿರ್ದೇಶಕರಾದ ಜಗದೀಶ ಅಡ್ತಲೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಕ್ರಿಸ್‌ ಮಸ್ ಕ್ಯಾರೆಲ್ ಗಾಯನ ಸ್ಪರ್ಧೆ, ಕ್ರಿಸ್ ಮಸ್ ಶುಭಾಶಯ ಪತ್ರ ತಯಾರಿಕೆ ಮತ್ತು ಸಾಂತಾಕ್ಲಾಸ್ ವೇಷ ಧರಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕೊನೆಯದಾಗಿ ಕೇಕ್ ಕತ್ತರಿಸುವುದು ಹಾಗೂ ಲಘು ಭೋಜನದೊಂದಿಗೆ ಮುಕ್ತಾಯಗೊಂಡಿತು.