ಸುಳ್ಯ ಜಾತ್ರೆಯ ಸಂದೇಶ ಸಾರುವ ಸಲುವಾಗಿ ಭಗವಧ್ವಜ ಅಭಿಯಾನ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ನೇತೃತ್ವ

ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಭಗವಧ್ವಜ ಅಭಿಯಾನವು ಚೆನ್ನಕೇಶವ ದೇವಸ್ಥಾನದ ಬಳಿ ಜ.6 ರಂದು ಆರಂಭಗೊಂಡಿತು.

ಜಾತ್ರೆಯ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಹಾಗೂ ವಾಹನಗಳಿಗೆ ಭಗಧ್ವಜ ಅಳವಡಿಸಿ ಸಹಕರಿಸುವಂತೆ ಕೋರಿ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಲತೀಶ್ ಗುಂಡ್ಯ ರವರು ಪ್ರಾಸ್ತಾವಿಕ ವಾಗಿ ತಿಳಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಕೃಪಾಶಂಕರ ತುದಿಯಡ್ಕ ರವರು ವಾಹನಕ್ಕೆ ಧ್ವಜ ಕಟ್ಟುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಚಿದಾನಂದ ವಿದ್ಯಾನಗರ,ಕೇಶವ ನಾಯಕ್ ಸುಳ್ಯ, ವಿ.ಹೆಚ್.ಪಿ ಅದ್ಯಕ್ಷ ಸೋಮಶೇಖರ ಪೈಕ,ಸಂಘಟನೆಯ ಪ್ರಮುಖರಾದ ಪ್ರಭಾಕರನ್ ನಾಯರ್,
ರಂಜಿತ್ ಸುಳ್ಯ,
ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೆ,ಸನತ್ ಪದವು, ಅವಿನ್ ಬೆಟ್ಟಂಪಾಡಿ,ರಾಜೇಶ್ ಭಟ್, ಗಿರೀಶ್ ಕುಂಟಿನಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ತದ ನಂತರ ಕಾರ್ಯಕರ್ತರು ತಮ್ಮ ವಾಹನಗಳಿಗೆ ಭಗವಧ್ವಜ ಅಳವಡಿಸಿ ಯಾತ್ರೆ ಕೈಗೊಂಡರು.