ಸುಬ್ರಹ್ಮಣ್ಯ : ಮಹಿಳೆ ನಾಪತ್ತೆ ಪ್ರಕರಣ

0

ಪ್ರಿಯಕರನೊಂದಿಗೆ ಠಾಣೆಗೆ ಹಾಜರಾಗಿ ಪ್ರಿಯಕರನೊಂದಿಗೇ ತೆರಳಿದ ಮಹಿಳೆ

ಎರಡು ತಿಂಗಳ ಹಿಂದೆ ಪ್ರಿಯಕರನೊಂದಿಗೆ ಕಾಣೆಯಾಗಿದ್ದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಭಾರತಿ ಮೂಕಮಲೆ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಪ್ರಿಯಕರನೊಂದಿಗೇ ತೆರಳಿದ್ದಾರೆ.

ಭಾರತಿ ಮೂಕಮಲೆ ತನ್ನ ಪ್ರಿಯಕರ ನಂದನ್ ನೊಂದಿಗೆ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ನಂದನ್ ನೊಂದಿಗೆ ಜೀವನ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಠಾಣೆಯಲ್ಲಿ ತನ್ನ ನಿರ್ಧಾರವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟು ನಂದನ್ ನೊಂದಿಗೆ ತೆರಳಿದ್ದಾರೆ.

ತನ್ನಿಬ್ಬರು ಸಣ್ಣ ಹೆಣ್ಣು ಮಕ್ಕಳನ್ನು, ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಭಾರತಿ ಮತ್ತವರ ಪ್ರಿಯಕರ ನಂದನ್ ಹುಡುಕಾಡಿದರೂ ಸಿಕ್ಕಿರಲಿಲ್ಲ. ತಿಂಗಳ ಹಿಂದೆ ವಿಡಿಯೋ ಮಾಡಿ ಹರಿಯ ಬಿಟ್ಟಿದ್ದ ಭಾರತಿ ತಾನು ಪ್ರಿಯಕರನೊಂದಿಗಿರುವುದಾಗಿ ತಿಳಿಸಿದ್ದು ತನ್ನನ್ನು ಹುಡುಕಾಡದಂತೆ ಕೇಳಿಕೊಂಡಿದ್ದರು. ಇದಾಗ್ಯೂ ಸುಬ್ರಹ್ಮಣ್ಯ ಪೊಲೀಸರು ಅವರನ್ನು ಹಿಡಿದು ತರುವ ಪ್ರಯತ್ನ ಮಾಡಿದ್ದರು.