ಸುಳ್ಯ ಶ್ರೀ ಚೆನ್ನಕೇಶವ ದೇವರ ಸಂಭ್ರಮದ ಜಾತ್ರೋತ್ಸವ: ಶ್ರೀ ದೇವರ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಭಕ್ತಿ,ಸಂಭ್ರಮದಿಂದ ನಡೆಯುತ್ತಿದ್ದು ಜ.09 ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ,ನಡುಬೆಳಗು,ಬಟ್ಟಲು ಕಾಣಿಕೆ ನಡೆಯಿತು.ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ ನಡೆಯಿತು.


ವಿವೇಕಾನಂದ ವೃತ್ತ, ಹಳೆಗೇಟು,ಹೊಸಗದ್ದೆ ಹಳೆಗೇಟು ಕಟ್ಟೆ,ಅಮೃತಭವನ ,ರಾಮಮಂದಿರ,ಜಟ್ಟಿಪಳ್ಳ ಕಟ್ಟೆ ಪೂಜೆಗಳು ನಡೆಯಿತು.


ಅಲ್ಲಲ್ಲಿ ಕಟ್ಟೆಗಳನ್ನು ಸುಂದರವಾಗಿ ವಿದ್ಯುತ್ ದೀಪಗಳಿಂದ ಮತ್ತು ಬಗೆ ಬಗೆಯ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.